Select Your Language

Notifications

webdunia
webdunia
webdunia
webdunia

ಗಾಂಧಿ ಗ್ರಾಮ ಪುರಸ್ಕಾರಕ್ಕೆ 2 ನೇ ಬಾರಿ ಆಯ್ಕೆ

ಗಾಂಧಿ ಗ್ರಾಮ ಪುರಸ್ಕಾರಕ್ಕೆ 2 ನೇ ಬಾರಿ ಆಯ್ಕೆ
ಚಿತ್ರದುರ್ಗ , ಸೋಮವಾರ, 28 ಅಕ್ಟೋಬರ್ 2019 (19:15 IST)
ಗ್ರಾಮ ಪಂಚಾಯತಿ ಗಳು ಅಂದ್ರೆ ಸಾಕು, ಕೆಲವು ಕಡೆ ಅವ್ಯವಹಾರ ಹಾಗೂ ಕುಂದು ಕೊರತೆಗಳ ತಾಣವಾಗಿರುತ್ತೆ. ಅದ್ರೆ ಈ ಗ್ರಾಮ ಪಂಚಾಯತಿ ಡಿಫೆರೆಂಟ್.

ಸರ್ಕಾರದ ಅನುದಾನಗಳನ್ನ ಸರಿಯಾಗಿ ಬಳಸಿ ಅಭಿವೃದ್ಧಿ ಕಡೆ ಸಾಗಿ ಸತತವಾಗಿ ಎರಡನೇ ಬಾರಿ ಗಾಂಧಿ ಗ್ರಾಮದ ಪುರಸ್ಕಾರವನ್ನ ತನ್ನದಾಗಿಸಿಕೊಂಡಿದೆ.

 ಚಿತ್ರದುರ್ಗ ನಗರದ ಹೊರ ವಲಯದ ಮಠದ ಕುರುಬರ ಹಟ್ಟಿ ಗ್ರಾಮದಲ್ಲಿನ ಪಂಚಾಯಿತಿ ಸತತವಾಗಿ ಕಳೆದ ಎರಡು ವರುಷಗಳಿಂದ ಪುರಸ್ಕಾರಕ್ಕೆ ಆಯ್ಕೆಯಾಗುತ್ತಿದೆ. ಈ ಗ್ರಾಮ ಪಂಚಾಯತಿ ಹಲವಾರು ಉತ್ತಮ ಕೆಲಸಗಳು ಮಾಡಿದೆ.

ಪಂಚಾಯತಿ ವ್ಯಾಪ್ಯಿಗೆ ಬರೋ ನಾಲ್ಕು ಹಳ್ಳಿಗಳಿಗೆ ಶುದ್ಧ ಕುಡಿಯೋ ನೀರು, ಶೌಚಾಲಯ, ಸಿಸಿ ರಸ್ತೆ ನಿರ್ಮಾಣ ಮಾಡಿ ಗ್ರಾಮಗಳನ್ನು ಅಭಿವೃದ್ಧಿ ಮಾಡಿದೆ. ಇನ್ನೂ ಪಂಚಾಯತಿಗೆ ಬರೋ ಆದಾಯದಲ್ಲಿ ಕೂಡ ಪ್ರತಿವರ್ಷ ಹೆಚ್ಚಿಸಿಕೊಂಡಿದೆ.  

  


Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಎಲ್ಲಿದ್ದೀಯಮ್ಮಾ? : ವೀರಶೈವ ಮಹಾಸಭೆ ಗರಂ