Publish Date: Wed, 02 Oct 2019 (18:15 IST)
Updated Date: Wed, 02 Oct 2019 (18:16 IST)
ಪ್ಲಾಸ್ಟಿಕ್ ಮುಕ್ತ ಗ್ರಾಮ ಪಂಚಾಯತಿಯಲ್ಲಿ ಪ್ಲಾಸ್ಟಿಕ್ ಬಕೆಟ್ ವಿತರಣೆ ಮಾಡಿದ್ದಾರೆ.
ಮಂಡ್ಯ ಚೌಡೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಶ್ರಮದಾನ ಹಾಗೂ ಸಾರ್ವಜನಿಕರಿಗೆ ಬಕೆಟ್ ವಿತರಣಾ ಕಾರ್ಯಕ್ರಮ ನೆಡೆಯಿತು.
ಗ್ರಾಮ ಪಂಚಾಯತಿ ಆವರಣದಲ್ಲಿ ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದಿಂದ ಶ್ರಮದಾನ ನೆಡೆಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣೇಗೌಡ ಮಾತನಾಡಿ, ನಮ್ಮ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಈಗಾಗಲೇ ಚೌಡೇನಹಳ್ಳಿ ಗ್ರಾಮ ಪಂಚಾಯತಿಯನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಘೋಷಣೆ ಮಾಡಲಾಗಿದೆ ಎಂದ್ರು.
ಇದೇ ಸಂದರ್ಭದಲ್ಲಿ ಪಂಚಾಯತಿಗೆ ಸೇರಿದ ಎಲ್ಲಾ ಗ್ರಾಮದ ಪತ್ರಿ ಮನೆಗಳಿಗೆ ಎರಡು ಪ್ಲಾಸ್ಟಿಕ್ ಬಕೆಟ್ ಗಳನ್ನು ವಿತರಣೆ ಮಾಡಿದ್ರು.