Select Your Language

Notifications

webdunia
webdunia
webdunia
webdunia

ಸರಕಾರಿ ಪ್ರಿಂಟಿಂಗ್ ಪ್ರೆಸ್ ನಿಂದ ಪುಸ್ತಕ ಅಕ್ರಮ ಸಾಗಾಟ ಆರೋಪ

ಸರಕಾರಿ ಪ್ರಿಂಟಿಂಗ್ ಪ್ರೆಸ್ ನಿಂದ ಪುಸ್ತಕ ಅಕ್ರಮ ಸಾಗಾಟ ಆರೋಪ
ಮೈಸೂರು , ಶನಿವಾರ, 4 ಆಗಸ್ಟ್ 2018 (15:42 IST)
ಸರಕಾರಿ ಪ್ರಿಂಟಿಂಗ್ ಪ್ರೆಸ್ ನಿಂದ ಅಕ್ರಮವಾಗಿ ಪುಸ್ತಕ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಕ್ರಮವಾಗಿ ಪುಸ್ತಕಗಳನ್ನು ಸಾಗಿಸುತ್ತಿದ್ದ ವಾಹನವನ್ನು ಹೋರಾಟಗಾರರು ತಡೆದಿದ್ದಾರೆ.

ಮೈಸೂರಿನ ಸರ್ಕಾರಿ ಪ್ರಿಂಟಿಂಗ್ ಪ್ರೆಸ್ ನಿಂದ ಪುಸ್ತಕ ಸಾಗಾಟ ಅಕ್ರಮವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪುಸ್ತಕ ಸಾಗಾಟದ ಮಿನಿ ಟೆಂಪೋವನ್ನು ಹೋರಾಟಗಾರರು ತಡೆಹಿಡಿದ ಘಟನೆ ನಡೆದಿದೆ. ಮೈಸೂರಿನ ಸರಸ್ವತಿಪುರಂನ ಕುಕ್ಕರಳಿ ಕೆರೆಯ ಬಳಿ ಘಟನೆ ನಡೆದಿದೆ.

SSLC, 6ನೇ ತರಗತಿಯ ಹೊಸ ಪಠ್ಯ ಪುಸ್ತಕ ಸಾಗಾಟ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಮೈಸೂರಿನ ಸರಸ್ವತಿಪುರಂ ಪೊಲೀಸರಿಂದ 3 ಟೆಂಪೋ ವಶಕ್ಕೆ ಪಡೆದುಕೊಳ್ಳಲಾಗಿದೆ. ಟೆಂಪೋ ತುಂಬೆಲ್ಲ ಪುಸ್ತಕಗಳು ಹಾಗೂ ಪ್ರಿಂಟಿಂಗ್ ಪೇಪರ್ ಗಳಿದ್ದವು.




Share this Story:

Follow Webdunia kannada

ಮುಂದಿನ ಸುದ್ದಿ

ಸಾವಿನಲ್ಲೂ ಒಂದಾದ ಆದರ್ಶ ದಂಪತಿ