Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಇಬ್ಬಾಗವಾಗುವ ಕಾಲ ಬಂದಿದೆ ಎಂದ ಬಿಜೆಪಿ ನಾಯಕ

ಕಾಂಗ್ರೆಸ್ ಇಬ್ಬಾಗವಾಗುವ ಕಾಲ ಬಂದಿದೆ ಎಂದ ಬಿಜೆಪಿ ನಾಯಕ
ಬಾಗಲಕೋಟೆ , ಬುಧವಾರ, 24 ಅಕ್ಟೋಬರ್ 2018 (22:50 IST)
ಪಿ. ಚಿದಂಬರಂ ಅವರು ರಾಹುಲ್ ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಯಾರೂ ರಾಹುಲ್ ಗಾಂಧಿಯನ್ನು ಒಪ್ಪುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಇಬ್ಬಾಗವಾಗುವ ಕಾಲ ಬಂದಿದೆ. ಕಾಂಗ್ರೆಸ್ ನವರೆ ರಾಹುಲ್ ಗಾಂಧಿ ಯನ್ನು ಒಪ್ಪುತ್ತಿಲ್ಲ. ಆದರೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಹುಲ್ ಗಾಂಧಿ ನಾಯಕತ್ವ ಒಪ್ಪುತ್ತಿದ್ದಾರೆ ಇದು ಹಾಸ್ಯಾಸ್ಪದ ಎಂದು ಬಿಜೆಪಿ ಮುಖಂಡ ಟೀಕೆ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ಮಾಜಿ ಸಚಿವ, ಶಾಸಕ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ನಿಶ್ಚಿತವಾಗಿ 2019 ರೊಳಗಾಗಿ ಕಾಂಗ್ರೆಸ್ ಎರಡು ಹೋಳಾಗುತ್ತದೆ. ಈ ದೇಶ ಅಭಿವೃದ್ಧಿ ಆಗಬೇಕಾದರೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ಆಗಿಯೇ ಆಗುತ್ತಾರೆ. ಅದರಲ್ಲಿ ಬೇರೆ ಸಂಶಯವಿಲ್ಲ.
ಐದು ಚುನಾವಣೆ ಯಲ್ಲಿ ಕಾಂಗ್ರೆಸ್ ಗೆ ನಿರಾಶೆಯಾಗಿದೆ.
ಉಪಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ. ಹಣ ಹೆಂಡ ಹಂಚಿ ಚುನಾವಣೆ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಡಿಸಿಎಮ್ ಪರಮೇಶ್ವರ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.
ಆನಂದ ನ್ಯಾಮಗೌಡ ಗೆಲ್ಲಿಸಿದರೆ ಮೂರು ತಿಂಗಳಲ್ಲಿ ರಸ್ತೆ ಮಾಡಿಸೊದಾಗಿ ಹೇಳಿದ್ದಾರೆ.
ಐದು ವರ್ಷ ಕಾಂಗ್ರೆಸ್ ಸರಕಾರ ನಿದ್ದೆ ಮಾಡುತ್ತಿತ್ತಾ? ಎಂದು ಪ್ರಶ್ನಿಸಿದರು. 
ಈ ಬಗ್ಗೆ ಜಮಖಂಡಿ ಬಿಜೆಪಿ ಕಾರ್ಯಕರ್ತರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ
ಚುನಾವಣಾಧಿಕಾರಿಗಳು ಜಿ ಪರಮೇಶ್ವರ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಗಮೇಶ್ ನಿರಾಣಿ, ಶ್ರೀಕಾಂತ್ ಕುಲಕರ್ಣಿ ಮಧ್ಯದ ಅಸಮಾಧಾನ ಶಮನವಾಗಿದೆ. ಸಂಗಮೇಶ್ ‌ನಿರಾಣಿ ಶ್ರೀಕಾಂತ್ ಪರ ಪ್ರಚಾರಕ್ಕೆ ಬರುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ಗೋವಿಂದ ಕಾರಜೋಳ ಹೇಳಿದ್ದಾರೆ. 



Share this Story:

Follow Webdunia kannada

ಮುಂದಿನ ಸುದ್ದಿ

ನವ ದಂಪತಿಗಳಿಗೆ ಖಳನಾಯಕಿಯಾಗಿರೋ ಹುಡುಗಿಯ ತಾಯಿ?