Select Your Language

Notifications

webdunia
webdunia
webdunia
webdunia

ಕೆ ಸಿ ವೇಣುಗೋಪಾಲ್ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ: ಜಯಚಂದ್ರ ಹೇಳಿದ್ದೇನು?

ಕೆ ಸಿ ವೇಣುಗೋಪಾಲ್ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ: ಜಯಚಂದ್ರ ಹೇಳಿದ್ದೇನು?
ತುಮಕೂರು , ಬುಧವಾರ, 24 ಅಕ್ಟೋಬರ್ 2018 (17:21 IST)
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಏನಾದ್ರೂ ಕಳಂಕ ತರುವಂತಹದ್ದೆ ಮಾತನಾಡಬೇಕು ಎಂಬಂತ ಧೋರಣೆ ನಡೆಯುತ್ತಿದೆ.
ಹಿಂದೆ ಕಾಂಗ್ರೆಸ್, ಎನ್ ಡಿ ಎ, ಯುಪಿಎ ಸರ್ಕಾರಗಳನ್ನ ನೋಡಿದ್ದೇನೆ. ಸಿಬಿಐ ದುರುಪಯೋಗ ಪಡಿಸಿಕೊಂಡಂತ ಪ್ರಕರಣಗಳನ್ನ ನೋಡಿರಲಿಲ್ಲ ಎಂದು ಮಾಜಿ ಸಚಿವ ಹೇಳಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ಮಾಜಿ ಸಚಿವ ಟಿ. ಬಿ.‌ ಜಯಚಂದ್ರ ಹೇಳಿಕೆ ನೀಡಿದ್ದಾರೆ. ರಾಜ್ಯದ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಅಂತಾ ಈಗೆಲ್ಲ ಮಾಡುತ್ತಿದ್ದಾರೆ. ಕೆ.ಸಿ. ವೇಣುಗೊಪಾಲ್ ಈ ಪ್ರಕರಣದ ಬಗ್ಗೆ ಅಂದೇ ಪ್ರತಿಕ್ರಿಯೇ ನೀಡಿದ್ದಾರೆ.
ಇದು ಕ್ಲೋಸ್ ಮ್ಯಾಟರ್. ರಾಜಕೀಯ ಕುಚೇಷ್ಟೆಯಿಂದ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.
ಈ ಹಿಂದೆ ಕಾಂಗ್ರೆಸ್, ಎನ್ ಡಿ ಎ, ಯುಪಿಎ ಸರ್ಕಾರಗಳನ್ನ ನೋಡಿದ್ದೆನೆ...ಸಿಬಿಐ ದುರುಪಯೋಗ ಪಡಿಸಿಕೊಂಡಂತ ಪ್ರಕರಣಗಳನ್ನ ನೋಡಿರಲಿಲ್ಲ ಎಂದರು.

ಇಂದು ಇಡಿ, ಐಟಿ, ಸಿಬಿಐ ಮೇಲೆ ಕೆಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ರಾಜ್ಯ ಬಿಜೆಪಿ‌ ನಾಯಕರು ಐಟಿ, ಇಡಿ, ಸಿಬಿಐ ಸಂಸ್ಥೆಗಳ ವಕ್ತಾರರಂತೆ ವರ್ತಿಸಿದ್ದಾರೆ. ಕೇಂದ್ರ ಸರ್ಕಾರ ರಾಜಕೀಯವಾಗಿ‌ ಮಣಿಸಲು ಒಂದು ಆಯುಧವಾಗಿ ಬಳಸುತ್ತಿದೆ ಎಂದು ಕಿಡಿಕಾರಿದರು.

ಇಂತಹ ಸಾಂವಿಧಾನಿಕ ಸಂಸ್ಥೆ ಗಳನ್ನ ರಾಜಕೀಯವಾಗಿ ಬಳಸಿಕೊಳ್ಳುವುದು ಕೆಟ್ಟ ಅಪಚಾರ ಎಂದೂ ಕೇಂದ್ರದ ವಿರುದ್ಧ ಜಯಚಂದ್ರ ದೂರಿದರು.



 

Share this Story:

Follow Webdunia kannada

ಮುಂದಿನ ಸುದ್ದಿ

ರಫೆಲ್ ಡೀಲ್: ಸಿಪಿಐ ಪ್ರತಿಭಟನೆ