Select Your Language

Notifications

webdunia
webdunia
webdunia
Sunday, 13 April 2025
webdunia

ನಟಿ ಸಂಜನಾ ಮೀಟೂ ಆರೋಪಕ್ಕೆ ತಕ್ಕ ಉತ್ತರ ನೀಡಿದ ಗಂಡ-ಹೆಂಡ್ತಿ ಸಿನಿಮಾ ತಂಡ

ಬೆಂಗಳೂರು
ಬೆಂಗಳೂರು , ಬುಧವಾರ, 24 ಅಕ್ಟೋಬರ್ 2018 (13:17 IST)
ಬೆಂಗಳೂರು : ನಟಿ ಸಂಜನಾ ಗಂಡ-ಹೆಂಡ್ತಿ ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ನಿರ್ದೇಶಕ ರವಿ ಶ್ರೀವತ್ಸ ನನ್ನನ್ನು ಹೀನಾಯವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆ ಗಂಡ-ಹೆಂಡ್ತಿ ಸಿನಿಮಾ ತಂಡದ ಸದ್ಯಸರು ಇದೀಗ ಸುದ್ದಿಗೋಷ್ಟಿ ನಡೆಸಿ ಸಂಜನಾ ಆರೋಪಕ್ಕೆ ತಕ್ಕ ಉತ್ತರ ನೀಡಿದ್ದಾರೆ.


ಗಂಡ-ಹೆಂಡ್ತಿ ಸಿನಿಮಾ ತಂಡದ ಸದ್ಯಸರು ಸಿನಿಮಾ ಬಿಡುಗಡೆ ಮಾಡುವ ಮುನ್ನ, ಹಾಗೂ ನಂತರ ಸಂಜನಾ ಮಾಧ್ಯಮಗಳಿಗೆ ನೀಡಿರುವ 'ಹಾಟ್' ಹೇಳಿಕೆಯನ್ನು ಇಂದು ಬಹಿರಂಗ ಪಡಿಸಿದರು. ಅಲ್ಲದೇ  ಅಂದು ನಟಿ ಸಂಜನಾ ಗಲ್ರಾನಿ ಅವರು ಬಟ್ಟೆ ಬಿಚ್ಚಲು ನನಗೆ ಅಭ್ಯಂತರ ವಿಲ್ಲ ಅಂತ ಅಂದು ಹೇಳಿದ್ದು, ಇಂದು ಉಲ್ಟಾ ಹೊಡೆಯುತ್ತಿದ್ದಾರೆ ಅಂತ ಸಿನಿಮಾ ತಂಡದವರು ಆರೋಪಿಸಿದ್ದಾರೆ.


ಇನ್ನು ಬ್ಯಾಂಕಾಕ್‍ನಲ್ಲಿ ನಡೆದ ಘಟನೆಗಳ ಬಗ್ಗೆ ಕೂಡ ಸಿನಿಮಾ ತಂಡ ಮಾಹಿತಿ ನೀಡಿದ್ದು, ಸಿನಿಮಾದ ಶೂಟಿಂಗ್ ಮುಗಿದ ನಂತರ, ಸಂಜನಾ ಗಲ್ರಾನಿ ಅವರು ಸುತ್ತಾಡುತ್ತಿದ್ದಾರು, ಮರು ದಿವಸದ ಶೂಟಿಂಗ್ ಗೆ ಮುಖ ಫ್ರೆಶ್ ಆಗಿರೋದಿಲ್ಲ ಅಂತ ಬುದ್ದಿ ಹೇಳಿದ್ದಾರೆ ಹೊರತು ಇನ್ನೇನು ಹೇಳಲಿಲ್ಲ ಎಂದು ಹೇಳಿದ್ದಾರೆ.


ಹಾಗೇ ಕಿಸ್ ಗೆ ಸಂಬಂಧಪಟ್ಟಂತೆ ನಾನೇ ಆಕೆಗೆ ಹೆಚ್ಚು ಕಿಸ್ ಸೀನ್ ಗಳ ಟೇಕ್ ಗಳನ್ನು ಹೆಚ್ಚು ತೆಗೆದುಕೊಳ್ಳಬೇಡ. ನಿನಗೆ ತೊಂದರೆಯಾಗುತ್ತದೆ, ಅಂತ ನಾನೇ ಬುದ್ದಿ ಹೇಳಿದೆ ಅಂತ ಹೇಳಿದ್ದಾರೆ. ಅಲ್ಲದೇ ಸಂಜನಾ ಅವರು ಇಲ್ಲ ಸಲ್ಲದ ಹೇಳಿಕೆಯಿಂದ ನನ್ನ 24 ವರುಷದ ಸಿನಿಮಾ ಜೀವನವನ್ನು ಹಾಳು ಮಾಡಿಬಿಟ್ಟರು, ಎಂದು ನಿರ್ದೇಶಕ ರವಿ ಶ್ರೀವತ್ಸ ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಿಥಿ’ ಚಿತ್ರದ ಬರಹಗಾರ ಈರೇ ಗೌಡ ಮೇಲೆ ಮೀಟೂ ಆರೋಪ