ಬೆಂಗಳೂರು : ‘ತಿಥಿ’ ಚಿತ್ರದ ಬರಹಗಾರ ಈರೇ ಗೌಡ ಮೇಲೆ ಏಕ್ತಾ ಅನ್ನೋ ಯುವತಿ ಮೀಟೂ ಆರೋಪ ಮಾಡಿದ್ದಾರೆ.
ಏಕ್ತಾ ಅನ್ನೋ ಯುವತಿ ತಿಥಿ ಚಿತ್ರದ ಬರಹದಿಂದ ಪ್ರಭಾವಿತಳಾಗಿ ಸಿನಿಮಾ ಕಲಿಯಲು ಈರೇಗೌಡನ ಬಳಿ ಬಂದಾಗ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಏಕ್ತಾ ಅಳಲು ತೋಡಿಕೊಂಡಿದ್ದಾರೆ.
ಈರೇಗೌಡರ ಮುಂದಿನ ಸಿನಿಮಾ ‘ಭಲೇ ಕೆಂಪ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವೇಳೆ ಈರೇಗೌಡ ಕಿಸ್ ನನಗೆ ಮಾಡಲು ಯತ್ನಿಸಿದರು. ಅಷ್ಟೇ ಅಲ್ಲದೇ ಎಷ್ಟೇ ನಿರಾಕರಿಸಿದರೂ ಕೂಡ, ಮುಟ್ಟಾಗಿದೆ ಎಂದರೂ ಕೇಳದ ಈರೇಗೌಡ ಸಿನಿಮಾಪಾಠ ಹೇಳಿಕೊಡುವುದನ್ನು ಬಿಟ್ಟು ಕಾಮಪಾಠಕ್ಕೆ ಮುಂದಾಗಿದ್ದಾನೆ ಎಂದು ಯುವತಿ ಈರೇಗೌಡನ ಕಾಮಚೇಷ್ಟೆಗಳನ್ನ ಸಾಮಾಜಿಕ ಜಾಲತಾಣದಲ್ಲಿ ಬಟ್ಟಬಯಲು ಮಾಡಿದ್ದಾರೆ.
ಇದೀಗ ಯುವತಿ ಏಕ್ತಾ ಅವರ ಬೆಂಬಲಕ್ಕೆ ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ನಿಂತಿದ್ದಾರೆ. ಅಲ್ಲದೇ ಫೇಸ್ಬುಕ್ ನಲ್ಲಿ ಏಕ್ತಾ ಪೋಸ್ಟ್ ನೋಡಿ ಜನ ಈರೇಗೌಡನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.