Select Your Language

Notifications

webdunia
webdunia
webdunia
webdunia

ದುನಿಯಾ ಚಿತ್ರದ ನಟಿ ರಶ್ಮಿ ಹಾಗೂ ಕುಟುಂಬದವರ ವಿರುದ್ಧ ದೂರು ದಾಖಲು

ದುನಿಯಾ ಚಿತ್ರದ ನಟಿ ರಶ್ಮಿ ಹಾಗೂ ಕುಟುಂಬದವರ ವಿರುದ್ಧ ದೂರು ದಾಖಲು
ಬೆಂಗಳೂರು , ಬುಧವಾರ, 24 ಅಕ್ಟೋಬರ್ 2018 (10:24 IST)
ಬೆಂಗಳೂರು : ದುನಿಯಾ ಚಿತ್ರದ ನಟಿ ರಶ್ಮಿ ಅವರ ಮನೆಯ ಟೆರೆಸ್ ಮೇಲಿಂದ ಬಿದ್ದು ಯುವಕನೊಬ್ಬ  ಸಾವನಪ್ಪಿರುವ ಘಟನೆ ನಡೆದಿದೆ.


ಪ್ರತೀಕ್ (25) ಮೃತಪಟ್ಟ ಯುವಕ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಈತ ರಶ್ಮಿ ಸಹೋದರ ಅರುಣ್ ಅವರ ಗೆಳೆಯನಾಗಿದ್ದ. ಪ್ರತೀಕ್ ಭಾನುವಾರ ರಾತ್ರಿ ರಶ್ಮಿ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದನು.


ಆದರೆ ರಶ್ಮಿ ತಮ್ಮ ಅರುಣ್ ಹಾಗೂ ಪ್ರತೀಕ್ ಟೆರೆಸ್ ಮೇಲೆ ಹೋಗಿ ಮದ್ಯಪಾನ ಪಾರ್ಟಿ ಮಾಡಿದ್ದರಿಂದ ಅದರ ಮತ್ತಿನಿಂದ ಪ್ರತೀಕ್ ಮನೆ ಮೇಲಿಂದ ಬಿದ್ದಿದ್ದಾನೆ. ತಕ್ಷಣ ಅವನನ್ನು ಆಸ್ಪತ್ರೆಗೆ ಕರೆದೊಯ್ದದರೂ ಕೂಡ ಮಾರ್ಗಮಧ್ಯದಲ್ಲಿ ಪ್ರತೀಕ್ ಸಾವನ್ನಪ್ಪಿದ್ದಾನೆ.


ಈ ಘಟನೆ ಸಂಬಂಧ ಪ್ರತೀಕ್ ಪೋಷಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ರಶ್ಮಿ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೂಡ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

‘ದಿ ವಿಲನ್’ ಚಿತ್ರದ ಯಶಸ್ವಿಗಾಗಿ ಪ್ರಾಣಿಬಲಿಕೊಟ್ಟ ಅಭಿಮಾನಿಗಳ ವಿರುದ್ಧ ದೂರು ದಾಖಲು