Publish Date: Wed, 24 Oct 2018 (10:32 IST)
Updated Date: Wed, 24 Oct 2018 (10:34 IST)
ಬೆಂಗಳೂರು: ಬಳ್ಳಾರಿ ಲೋಕಸಭೆ ಉಪಚುನಾವಣೆಯ ವಾಕ್ಸಮರ ಜೋರಾಗಿದ್ದು, ಶ್ರೀರಾಮುಲು ವಿರುದ್ಧ 420 ಪದ ಪ್ರಯೋಗ ನಡೆಸಿದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಪ್ರಚಾರ ಭರಾಟೆಯಲ್ಲಿ ಸಿದ್ದರಾಮಯ್ಯ ಈ ರೀತಿ ಮಾತನಾಡಿದ್ದಾರೆ. ಶ್ರೀರಾಮುಲು ಮೇಲೆ ಈ ರೀತಿ ಮಾತನಾಡುವ ಮೂಲಕ ವಾಲ್ಮೀಕಿ ಸಮುದಾಯವನ್ನು ಅವಮಾನಿಸಿದ್ದಾರೆ. ಕೂಡಲೇ ಸಿದ್ದರಾಮಯ್ಯ ವಾಲ್ಮೀಕಿ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಬಿಎಸ್ ವೈ ಆಗ್ರಹಿಸಿದ್ದಾರೆ.
ಇನ್ನು ಸಿಎಂ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ಬಿಎಸ್ ವೈ ಮೊದಲು ನಿಮ್ಮ ಅಭ್ಯರ್ಥಿ ಯಾರು ಎಂದು ಮೊದಲು ಹೇಳಿ. ಒಬ್ಬರು ರಾಹುಲ್ ಗಾಂಧಿ ಅಂತಾರೆ, ಇನ್ನೊಬ್ಬರು ಚಿದಂಬರಂ ಅಂತಾರೆ. ಆದರೆ ಎಲ್ಲಾ ಸಮೀಕ್ಷೆಗಳಲ್ಲಿ ಮೋದಿಯೇ ಪ್ರಧಾನಿ ಅಂತ ವರದಿ ಬಂದಿದೆ. ಹೀಗಾಗಿ ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಮೊದಲು ಸ್ಪಷ್ಟನೆ ನೀಡಲಿ ಎಂದು ಬಿಎಸ್ ವೈ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.