Select Your Language

Notifications

webdunia
webdunia
webdunia
Friday, 11 April 2025
webdunia

420 ಎಂದು ಕರೆದ ಸಿದ್ದರಾಮಯ್ಯಗೆ ಬಿ ಶ್ರೀರಾಮುಲು ತಿರುಗೇಟು

ಸಿದ್ದರಾಮಯ್ಯ
ಬಳ್ಳಾರಿ , ಸೋಮವಾರ, 22 ಅಕ್ಟೋಬರ್ 2018 (16:35 IST)
ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಇಂದು ಬಿಜೆಪಿ ಮತ್ತು ಕಾಂಗ್ರೆಸ್ ಬಿರುಸಿನ ಮತ ಪ್ರಚಾರ ನಡೆಯಿತು. ಬಿಜೆಪಿ ಪರ ಶ್ರೀರಾಮುಲು, ಕಾಂಗ್ರೆಸ್ ಪರ ಸಿದ್ದರಾಮಯ್ಯ ಪರಸ್ಪರ ಕೆಸರೆರಚಾಟ ನಡೆಸಿದ ಪ್ರಸಂಗ ನಡೆದಿದೆ.
 

ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಪ್ರಚಾರ ಮಾಡಿದ ಸಿದ್ದರಾಮಯ್ಯ ಬಿಜೆಪಿಯ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಶ್ರೀರಾಮುಲು ಅವರಿಗೆ 420 ಬಿಟ್ಟರೆ ಏನೂ ಗೊತ್ತಿಲ್ಲ. ಬಳ್ಳಾರಿಗೆ ಯಾವ ಪ್ರಯೋಜನವನ್ನೂ ಮಾಡಿಲ್ಲ ಎಂದು ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀರಾಮುಲು ‘ವಿಧಾನಸಭೆ, ಲೋಕಸಭೆಯಲ್ಲಿ ನಾನು ಮಾತನಾಡುವಾಗ ನೀವು ನಿದ್ರೆಯಲ್ಲಿದ್ದಿರಿ ಎನಿಸುತ್ತದೆ. ಸಂಸದರ ನಿಧಿಯ ಸಮರ್ಪಕ ಬಳಕೆ ವಿಚಾರದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದೇನೆ. 16 ನೇ ಲೋಕಸಭೆಯ 20 ಚರ್ಚೆಯಲ್ಲಿ ಭಾಗವಹಿಸಿ 572 ಪ್ರಶ್ನೆ ಕೇಳಿದ್ದೇನೆ. ನಿಮ್ಮ ರಾಹುಲ್ ಗಾಂಧಿ ಕೇವಲ 12 ಚರ್ಚೆಯಲ್ಲಿ ಭಾಗವಹಿಸಿದ್ದು, ಒಂದು ಪ್ರಶ್ನೆಯೂ ಕೇಳಿಲ್ಲ ಎಂದು ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಾಮುಲು ವಿರುದ್ಧ ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಮಾಡಿದ ಆರೋಪಗಳೇನು ಗೊತ್ತಾ?