Publish Date: Mon, 22 Oct 2018 (11:58 IST)
Updated Date: Mon, 22 Oct 2018 (12:00 IST)
ಹಾಸನ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿದ ಬೆನ್ನಲ್ಲೇ ಮಾಜಿ ಸಚಿವ ಎ.ಮಂಜು ಅವರು ಗೌಡರ ಕುಟುಂಬಕ್ಕೆ ಈ ಭಾರಿ ನನ್ನ ಸಪೋರ್ಟ್ ಇರುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎ.ಮಂಜು ಅವರು, ‘ವಿರೋಧ ಪಕ್ಷದವರು ಅದನ್ನೆಲ್ಲ ಮಾತನಾಡುತ್ತಿರುವುದು ಸಹಜ. ನಾನು ದೇವೇ ಗೌಡ ಕುಟುಂಬದ ರಾಜಕೀಯ ವಿರೋಧಿ. ಹಿಂದಿನಿಂದಿಲೂ ಗೌಡರ ಕುಟುಂಬವನ್ನು ವಿರೋಧಿಸಿಕೊಂಡು ಬಂದವನು. ಈಗಲೂ ಅದನ್ನೆ ಮುಂದುವರಿಸುತ್ತೇನೆ ‘ ಎಂದು ಹೇಳಿದ್ದಾರೆ.
ನಾನು ನನ್ನ ಕಾರ್ಯಕರ್ತರನ್ನು ಉಳಿಸಬೇಕಿದೆ. ಇದು ನನ್ನ ವೈಯಕ್ತಿಕವಲ್ಲ ಕಾರ್ಯಕರ್ತರ ಕೂಗು. ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿದವನು ನಾನು. ಪ್ರಜ್ವಲ್ ನಿಂತಕೊಂಡರೇ ನನಗೇನು. ಗೌಡರ ಕುಟುಂಬಕ್ಕೆ ಈ ಭಾರಿ ನನ್ನ ಸಪೋರ್ಟ್ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ