Select Your Language

Notifications

webdunia
webdunia
webdunia
webdunia

ವ್ಯವಸ್ಥಿತವಾಗಿ ನೆಟ್ವರ್ಕ್ ಮಾಡಿಕೊಂಡು ಮೊಬೈಲ್ ಎಗರಿಸುತ್ತಿದ್ದ ಅಸಾಮಿಗಳು

ವ್ಯವಸ್ಥಿತವಾಗಿ ನೆಟ್ವರ್ಕ್ ಮಾಡಿಕೊಂಡು ಮೊಬೈಲ್ ಎಗರಿಸುತ್ತಿದ್ದ ಅಸಾಮಿಗಳು
bangalore , ಶನಿವಾರ, 14 ಜನವರಿ 2023 (19:25 IST)
ದಿನಪತ್ರಿಕೆ ಗಳು ಕೈಯಲ್ಲಿ ಹಿಡಿದು ರಷ್ ಆಗಿರೋ ಬಸ್ ಗಳನ್ನ ಹತ್ತುತ್ತಿದ್ದ ಆರೋಪಿಗಳು. ಇದೇ ನ್ಯೂ ಸ್ ಪೇಪರ್ಗಳನ್ನ ಅಡ್ಡಹಿಡಿದು ಬಸ್ ನಲ್ಲಿದ್ದ ಪ್ಯಾಸೆಂಜರ್ ಗಳ ಜೇಬಿನಲ್ಲಿದ್ದ ಮೊಬೈಲ್‌ಗಳನ್ನ ಕ್ಷಣಾರ್ಧದಲ್ಲಿ ಎಗರಿಸಿ ತಮ್ಮ ಕೈಚಳ ತೋರಿಸುತ್ತಿದ್ದ ಖತರ್ನಾಕ್‌ ಅಸಾಮಿಗಳನ್ನ ಪೊಲೀಸರು ಸಿನಿಮಾಯ ಸ್ಟೈಲ್‌ನಲ್ಲಿ ಅರೆಸ್ಟ್ ಮಾಡಿದ್ದಾರೆ. ತನಿಖೆಯಲ್ಲಿ ಇವರ ಮತ್ತೊಂದು ಕರಾಳ ಮುಖ ಬಯಲಾಗಿದೆ.
ಸಿಲಿಕಾನ್ ಸಿಟಿ‌ ಜನರ ಸಂಪರ್ಕ ಜೀವನಾಡಿ  ಬಿಎಂಟಿಸಿ ಬಸ್ ಅಂದ್ರೆ ತಪ್ಪಗಲಾರದು. ಸದಾ ಜನರಿಂದ ರಷ್ ಆಗಿರೋ ಬಸ್ ಗಳನ್ನ ಟಾರ್ಗೆಟ್ ಮಾಡಿ ಬರೋ ಈ ಕತರ್ನಾಕ್ ಅಸಾಮಿಗಳಾದ ಜಾಫರ್ ಸಿದ್ದೀಕ್, ಸೈಯಾದ್ ಅಖಿಲ್, ಜತೆಯಲ್ಲಿ ಬಂದಿರುವ ಸಹಚರರನ್ನ ಬಳಸಿಕೊಂಡು ಮೊಬೈಲ್‌ಗಳನ್ನ ಎಗರಿಸಿ ತಮ್ಮ ಕೆಲಸ ಆಗುತ್ತಿದ್ದಂತೆ ಮಾಲನ್ನ ಆಟೋದಲ್ಲಿ ಬರುತ್ತಿದ್ದ ಮತ್ತೊಂದು ಟೀಂ‌ಗೆ ಪಾಸ್ ಮಾಡುತ್ತಿದ್ದರು.ಹೀಗೆ  ಕದ್ದ ಮಾಲ್‌ ಗಳನ್ನ ಜೆಜೆ ನಗರ, ಗೋರಿಪಾಳ್ಯ ಭಾಗದಲ್ಲಿ ರುವ ಆರೋಪಿಗಳ ಕೈಗೆ ಮಾರಾಟ ಮಾಡಲು ಕೊಡುತ್ತಿದ್ದರು.
ಕದ್ದ ಮೊಬೈಲ್‌ಗಳ ತಮ್ಮ ಕೈ ಸೇರುತ್ತಿದ್ದಂತೆ ಅದರ ಐಎಂಇಐ ನಂಬರ್ ಗಳನ್ನ‌ ಚೇಂಜ್  ಮಾಡಿ ವಿದೇಶಗಳಿಗೆ ರವಾನಿಸುವ ಪ್ಲಾನ್ ಮಾಡಿಕೊಂಡಿದ್ರಂತೆ.ಇಂತಹ ಐನಾತಿ‌ ಕಳ್ಳರ ಜಾಲವನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಸಕ್ಸಸ್ ಫುಲ್ ಆಗಿ ಅರೆಸ್ಟ್ ಮಾಡಿದ್ದಾರೆ. ಇದು ಕೇವಲ ಮೊಬೈಲ್‌ ಕಳ್ಳರಷ್ಟೆ ಎಂದು ಸುಮ್ಮನಾಗದೇ ಪಕ್ಕ ಪ್ಲಾನ್ ಮಾಡಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸವೇಶ್ವರ ದೇವಸ್ಥಾನದಲ್ಲಿ ಅದ್ದೂರಿ ಕಡಲೇಕಾಯಿ ಪರಿಷೆ