Publish Date: Tue, 27 Apr 2021 (08:35 IST)
Updated Date: Tue, 27 Apr 2021 (08:36 IST)
ಹುಬ್ಬಳ್ಳಿ : ಪ್ರಿಯಕರನ ಜೊತೆ ಸೇರಿ ಸ್ವಂತ ಸಹೋದರನನ್ನು ಕೊಂದು ತುಂಡುತುಂಡಾಗಿ ಕತ್ತರಿಸಿ ದೇಹದ ಭಾಗಗಳನ್ನು ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿದ ಹಿನ್ನಲೆಯಲ್ಲಿ 32 ವರ್ಷದ ನಟಿಯೊಬ್ಬಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ನಟಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಇದಕ್ಕೆ ಆಕೆಯ ಸಹೋದರ ವಿರೋಧ ವ್ಯಕ್ತಪಡಿಸಿದ್ದಾನೆ. ಇದರಿಂದ ಕೋಪಗೊಂಡ ನಟಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತರ ಜೊತೆ ಸೇರಿ ಮನೆಗೆ ನುಗ್ಗಿ ಸಹೋದರರನ್ನು ಕತ್ತು ಹಿಸುಕಿ ಕೊಂದು ಶಿರಚ್ಛೇಧನ ಮಾಡಿ ತಲೆಯನ್ನು ಕಾಡಿನಲ್ಲಿ ಎಸೆದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾರೆ.
ಮೃತನ ತಲೆಯನ್ನು ಸ್ಥಳೀಯರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದಾಗ ಸತ್ಯಾಂಶ ತಿಳಿದುಬಂದಿದೆ. ಹೀಗಾಗಿ ಪೊಲೀಸರು ನಟಿ ಸೇರಿ ಐವರನ್ನು ಬಂಧಿಸಿದ್ದಾರೆ.