Select Your Language

Notifications

webdunia
webdunia
webdunia
webdunia

ಮದುವೆ ಪ್ರಸ್ತಾಪ ತಿರಸ್ಕರಿಸಿದ ಯುವತಿ ಅಪಹರಿಸಿ 4 ತಿಂಗಳುಗಳವರೆಗೆ ಅತ್ಯಾಚಾರ

ಮದುವೆ ಪ್ರಸ್ತಾಪ ತಿರಸ್ಕರಿಸಿದ ಯುವತಿ ಅಪಹರಿಸಿ 4 ತಿಂಗಳುಗಳವರೆಗೆ ಅತ್ಯಾಚಾರ
ಗ್ವಾಲಿಯರ್ , ಮಂಗಳವಾರ, 31 ಅಕ್ಟೋಬರ್ 2017 (13:25 IST)
ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕಾಗಿ ಆರೋಪಿಗಳು 18 ವರ್ಷದ ಯುವತಿಯನ್ನು ಅಪಹರಿಸಿ ನಾಲ್ಕು ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.
ಯುವತಿಯನ್ನು ಅಪಹರಿಸಿದ ಆರೋಪಿಗಳು ಆಕೆಯನ್ನು ದೇಶದ ವಿವಿಧ ನಗರಗಳಿಗೆ ಕರೆದುಕೊಂಡು ಹೋಗಿ ನಾಲ್ಕು ತಿಂಗಳುಗಳ ಕಾಲ ರೇಪ್ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 
  
ಸುಮಾರು ನಾಲ್ಕು ತಿಂಗಳುಗಳ ನಂತರ ಯುವತಿ ಆರೋಪಿಗಳ ಕಪಿಮುಷ್ಠಿಯಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾಳೆ. ನಂತರ ಮನೆಗೆ ಹೋಗಿ ಪೋಷಕರೊಂದಿಗೆ ನೇರ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾಳೆ.
 
ಕಳೆದ ಜುಲೈ 2 ರಂದು ಆರೋಪಿಗಳಾದ ಬ್ರಿಜೇಶ್ ಮತ್ತು ಆತನ ಮೂವರು ಸ್ನೇಹಿತರು ಮನೆಯಲ್ಲಿ ಏಕಾಂಗಿಯಾಗಿದ್ದ ಯುವತಿಯನ್ನು ಅಪಹರಿಸಿದ ಘಟನೆ ಗ್ವಾಲಿಯರ್ ಬಳಿಯಿರುವ ಗ್ರಾಮದಲ್ಲಿ ನಡೆದಿದೆ. ಬ್ರಿಜೇಷ್ ಯುವತಿಯ ಕುಟುಂಬಕ್ಕೆ ಪರಿಚಿತವಾಗಿದ್ದ. ಪದೇ ಪದೇ ಯುವತಿಯ ಮನೆಗೆ ಭೇಟಿ ನೀಡುತ್ತಿದ್ದ ಪೊಲೀಸ್ ಮೂಲಗಳು ತಿಳಿಸಿವೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷದ ಹೆಸರು ಅಧಿಕೃತವಾಗಿ ಘೋಷಿಸಿದ ರಿಯಲ್ ಸ್ಟಾರ್ ಉಪ್ಪಿ