Publish Date: Tue, 31 Oct 2017 (11:47 IST)
Updated Date: Tue, 31 Oct 2017 (11:50 IST)
ಬೆಂಗಳೂರು: ಡ್ಯಾನ್ಸ್ ಕ್ಲಾಸ್ ನಲ್ಲೇ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಟ್ಟೂರು ಲೇಔಟ್‌ನಲ್ಲಿ ನಡೆದಿದೆ.
ಚಂದನಾ(17) ಆತ್ಮಹತ್ಯೆಗೆ ಶರಣಾದ ಯುವತಿ. ಡ್ಯಾನ್ಸ್ ಮಾಸ್ಟರ್ ಸತೀಸ್ ಕಿರುಕುಳದಿಂದ ಈ ಘಟನೆ ನಡೆದಿದೆ ಎಂದು ಚಂದನಾ ಪೋಷಕರು ಆರೋಪಿಸಿದ್ದಾರೆ. ಘಟನೆ ನಂತರ ಆಕ್ರೋಶಗೊಂಡ ಬಾಲಕಿಯ ಸಂಬಂಧಿಕರು ಡ್ಯಾನ್ಸ್ ಮಾಸ್ಟರ್ ಸತೀಸ್ ಗೆ ಮನಬಂದಂತೆ ಥಳಿಸಿದ್ದಾರೆ.
ಡ್ಯಾನ್ಸ್ ಕ್ಲಾಸ್‌ಗೆ ಹೋಗುತ್ತಿದ್ದಾಗ ಅಲ್ಲಿ ಚಂದನಾಗೆ ಸತೀಶ್ ಪರಿಚಿತನಾಗಿದ್ದಾನೆ. ಆದ್ರೆ ನಿನ್ನೆ ರಾತ್ರಿ ಚಂದನಾ ಅಲ್ಲಿಗೆ ಹೋಗಿದ್ಯಾಕೆ ಎಂಬ ಪ್ರಶ್ನೆ ಪೊಲೀಸರಿಗೆ ಕಾಡುತ್ತಿದೆ. ಹೀಗಾಗಿ ಸತೀಶ್ ಆಕೆಯನ್ನು ಅಲ್ಲಿಗೆ ಕರೆಸಿಕೊಂಡು ಕಿರುಕುಳ ನೀಡಿರಬಹುದು. ಇದರಿಂದ ಬೇಸತ್ತು ಆಕೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳ ನೀಡಿದ ಆರೋಪದ ಮೇಲೆ ಸತೀಶ್ ನನ್ನು ಬಂಧಿಸಿದ್ದಾರೆ.