Select Your Language

Notifications

webdunia
webdunia
webdunia
webdunia

ವಿವಾಹವಾದ ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆಗೆ ಶರಣಾದ ನವದಂಪತಿ

ವಿವಾಹವಾದ ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆಗೆ ಶರಣಾದ ನವದಂಪತಿ
ಪ್ರಕಾಶಂ(ಆಂಧ್ರಪ್ರದೇಶ) , ಬುಧವಾರ, 20 ಸೆಪ್ಟಂಬರ್ 2017 (16:57 IST)
ಪ್ರಕಾಶಂ(ಆಂಧ್ರಪ್ರದೇಶ): ಮದುವೆಗಳು ಸಾಮಾನ್ಯವಾಗಿ ಜೊತೆಯಾಗಿ ಜೀವನ ನಡೆಸುವ ಭರವಸೆಯೊಂದಿಗೆ ನೆರವೇರಿಸಲಾಗುತ್ತದೆ, ಆದರೆ ಒಂದಾಗಿ ಸಾಯುವ ಭರವಸೆಯ ಮೇರೆಗೆ ವಿವಾಹ ನೆರವೇರಿಸಲಾಗುವುದಿಲ್ಲ. ಆದರೆ, ಇಲ್ಲೊಂದು ನವ ಜೋಡಿಯೊಂದು ವಿವಾಹವಾದ ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆಗೆ ಶರಣಾಗಿದೆ.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನವವಿವಾಹಿತರು ವಿವಾಹವಾದ ಕೆಲವೇ ಗಂಟೆಗಳಲ್ಲಿ ಚಲಿಸುತ್ತಿರುವ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಹ ಘಟನೆ ವರದಿಯಾಗಿದೆ.
 
ಪ್ರೇಮಿಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರು. ವಿಜಯವಾಡದಲ್ಲಿ ಮದುವೆಯಾಗಲು ಮಂಗಳವಾರ ಅವರು ತಮ್ಮ ಮನೆಗಳನ್ನು ತೊರೆದರು. ವೆಟಪಾಲೆಮ್ ರೈಲ್ವೆ ನಿಲ್ದಾಣದ ಬಳಿ ಬುಧವಾರ ರೈಲ್ವೆ ಜಾಡುಗಳಲ್ಲಿ ಅವರ ದೇಹಗಳನ್ನು ಪತ್ತೆ ಮಾಡಲಾಯಿತು.
 
ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ 22 ವರ್ಷ ವಯಸ್ಸಿನ ಬೆಟ್ಟುಲ್ಲಾ ಸಂದೀಪ್ ಮತ್ತು 20 ವರ್ಷ ವಯಸ್ಸಿನ ಭೋಗಿರೆಡ್ಡಿ ಮೌನಿಕಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರ ಪ್ರೀತಿಗೆ ಮನೆಯಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ವಿಜಯವಾಡಾ ನಗರದಲ್ಲಿ ವಿವಾಹ ಮಾಡಿಕೊಳ್ಳಲು ನಗರಕ್ಕೆ ಆಗಮಿಸಿದ್ದರು ಎಂದು ಮೂಲಗಳು ತಿಳಿಸಿವೆ.  
 
ಮೃತ ಜೋಡಿಯ ಸ್ನೇಹಿತರ ಪ್ರಕಾರ ಮಂಗಳವಾರ ವಿಜಯವಾಡದಲ್ಲಿ ಅವರು ವಿವಾಹವಾದರು. ಅದೇ ರಾತ್ರಿ, ದಂಪತಿಗಳು ತಮ್ಮ ಸ್ನೇಹಿತರನ್ನು ತಮ್ಮ ಜೀವನಕ್ಕೆ ಅಂತ್ಯಗೊಳಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
 
ವಿಜಯವಾಡಾದಲ್ಲಿ ನಿನ್ನೆ ರಾತ್ರಿ ವಿವಾಹವಾದ ನಂತರ ದಂಪತಿ ತಮ್ಮ ತಮ್ಮ ಗೆಳೆಯರಿಗೆ ತಾವು ಜೀವನ ಅಂತ್ಯಗೊಳಿಸಲು ನಿರ್ಧರಿಸಿದ್ದಾಗಿ ಮೊಬೈಲ್ ಸಂದೇಶ ರವಾನಿಸಿದ್ದಾರೆ.
 
ವಿವಾಹವಾದ ಕೆಲವೇ ಗಂಟೆಗಳ ನಂತರ ದಂಪತಿ ಪರಸ್ಪರ ಕೈಹಿಡಿದು ಚಲಿಸುತ್ತಿರುವ ರೈಲಿನ ಮುಂದೆ ಹಾರಿ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಮನೆಯವರ ವಿರೋಧ ಎದುರಿಸಲು ಧೈರ್ಯವಿಲ್ಲದಿರುವುದರಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ರೈತರಿಗೆ ನ್ಯಾಯ ಸಿಗುವ ವಿಶ್ವಾಸವಿದೆ: ಮೋಹನ್ ಕಾತರಕಿ