Select Your Language

Notifications

webdunia
webdunia
webdunia
webdunia

ಪತಿಯ ಪುನರ್ಜನ್ಮವೆಂದು ದನದ ಕರುವನ್ನೇ ಮದುವೆಯಾದ 74ರ ವೃದ್ದೆ..!

ಪತಿಯ ಪುನರ್ಜನ್ಮವೆಂದು ದನದ ಕರುವನ್ನೇ ಮದುವೆಯಾದ 74ರ ವೃದ್ದೆ..!
ಕಾಂಬೋಡಿಯಾ , ಭಾನುವಾರ, 23 ಜುಲೈ 2017 (16:48 IST)
ಕಾಂಬೋಡಿಯಾ: ಪುನರ್ಜನ್ಮ ಎನುವುದು ನಿಜವೋ, ಸುಳ್ಳೋ ಕಂಡವರ್ಯಾರು... ಗೊತ್ತಿಲ್ಲ. ಆದರೆ ಈ ಪುನರ್ಜನದ ಬಗ್ಗೆ ಅತಿಯಾದ ನಂಬಿಕೆ ಉಳ್ಳುವವರು ಒಮ್ಮೊಮ್ಮೆ ಏನೆಲ್ಲ ಅವಾಂತರಗಳನ್ನು ಮಾಡಿಕೊಲ್ಳುತಾರೆ ಎಂಬುದಕ್ಕೆ ಈ ಘಟನೆಯೂ ಒಂದು ಉದಾಹರಣೆ.
 
ಕಾಂಬೋಡಿಯಾದ 74 ವರ್ಷದ ಕಿಮ್ ಹಾಂಗ್ ಎಂಬ ಮಹಿಳೆ ತನ್ನ ಪತಿ ಕರುವಿನ ರೂಪದಲ್ಲಿ ಪುನರ್ಜನ್ಮ ಪಡೆದುಕೊಂಡಿದ್ದಾರೆ ಎಂಬ ನಂಬಿಕೆಯಿಂದ ಕರುವನ್ನೇ ವಿವಾಹವಾಗಿರುವ ಕಥೆಯಿದು. 
 
ಕಿಮ್ ಹಾಂಗ್, ತನ್ನ ಪತಿ ನಿಧನದ ಬಳಿಕ ತೀರಾ ಮಂಕಾಗಿ ಹೋಗಿದ್ದರು. ಅ ಘಟನೆ ಅವರನ್ನು ಅಷ್ಟು ಘಾಸಿಗೊಳಗಾಗುವಂತೆ ಮಾಡಿತ್ತು.  ಪ್ರತಿದಿನ ಪತಿ ಧ್ಯಾನದಲ್ಲೇ ಇರುತ್ತಿದ್ದ ಕಿಮ್ ಅವರಿಗೆ  ಒಂದು ದಿನ ಪತಿ  ಕನಸಲ್ಲಿ ಬಂದು  ನಮ್ಮ ಕೊಟ್ಟಿಗೆಯಲ್ಲಿ ಜನಿಸಿರುವ ಕರು ನಾನೇ ಎಂದು ಹೇಳಿದರಂತೆ. ಅಷ್ಟಕ್ಕೆ ತಡ ಮಾಡದ ಕಿಮ್ ತಕ್ಷಣ ಕೊಟ್ಟಿಗೆಗೆ ಹೋಗಿ ಕರುವನ್ನು ಪತಿ ಎಂದು ವಿವಾಹವಾಗಿಯೇ ಬಿಟ್ಟಿದ್ದಾರೆ. ಇನ್ನೂ ವಿಚಿತ್ರವೆಂದರೆ ಇದನ್ನು ಕಿಮ್ ಕುಟುಂಬ ಹಾಗೂ ಊರವರೆಲ್ಲರೂ ನಂಬಿರುವುದು ವಿಶೇಷ.
 
ಕಿಮ್ ಹೇಳುವ ಪ್ರಕಾರ ನನ್ನ ಗಂಡ ಬದುಕಿದ್ದಾಗ ನನ್ನ ಜತೆ ವರ್ತಿಸುತ್ತಿದ್ದ ರೀತಿಯೇ ಕರುವೂ ವರ್ತಿಸುತ್ತದೆ. ನನ್ನ  ನೋಡಿದ ಕೂಡಲೇ ಪ್ರೀತಿ ತೋರುತ್ತದೆ. ಹೀಗಾಗಿ ಈ ಕರು ನಿಜಕ್ಕೂ ತನ್ನ ಪತಿಯೇ ಎಂಬುದನ್ನು ನಂಬಿದ್ದಾರಂತೆ ಕಿಮ್.
 

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ ಒಳಗೇ ನಡೆಯುತ್ತಾ ವಿಧಾನಸಭಾ ಚುನಾವಣೆ..?