Select Your Language

Notifications

webdunia
webdunia
webdunia
webdunia

ಮುಂಬೈನಲ್ಲಿ ನಿರುದ್ಯೋಗಿ ನವದಂಪತಿ ನೇಣಿಗೆ ಶರಣು

Unemployment
ಮಹಾರಾಷ್ಟ್ರ , ಶನಿವಾರ, 23 ಸೆಪ್ಟಂಬರ್ 2017 (09:42 IST)
ಮಹಾರಾಷ್ಟ್ರ:  ನಿರುದ್ಯೋಗಿ ನವದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಮುಂಬೈನ ಮಾಲಾಡ್ ಪ್ರದೇಶದಲ್ಲಿ ನಡೆದಿದೆ.

ಧನರಾಜ್(24), ಕಾಜಲ್(19) ಆತ್ಮಹತ್ಯೆಗೆ ಶರಣಾದ ದಂಪತಿ. ಕೆಲತಿಂಗಳ ಹಿಂದಷ್ಟೇ ಕಾಜಲ್, ಧನರಾಜ್ ಮದುವೆಯಾಗಿತ್ತು. ಮದುವೆಯಾದ ಸ್ವಲ್ಪ ದಿನದಲ್ಲೇ ಧನರಾಜ್ ಉದ್ಯೋಗ ಕಳೆದುಕೊಂಡಿದ್ದ. ಇದರಿಂದ ಬೇಸತ್ತು ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ 8.30ರ ಸುಮಾರಿಗೆ ದಂಪತಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಪೊಲೀಸರು ಇಬ್ಬರ ಶವವನ್ನು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಈ ಕುರಿತು ತನಿಖೆ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

18 ವಸಂತಗಳನ್ನ ಪೂರೈಸಿದ ವೆಬ್ ದುನಿಯಾ ಜಾಲತಾಣ