Publish Date: Thu, 05 Jan 2023 (09:22 IST)
Updated Date: Thu, 05 Jan 2023 (09:25 IST)
ಬೆಂಗಳೂರು : ಜನವರಿಯಲ್ಲಿ ರಾಜ್ಯ ಬಿಜೆಪಿಗರಿಗೆ ಎಲೆಕ್ಷನ್ ಟಾಸ್ಕ್ ವರಿ ಶುರುವಾಗಿದೆ. ಬಿಜೆಪಿಯಲ್ಲಿ ತ್ರಿಮೂರ್ತಿ ಚಕ್ರವ್ಯೂಹ ರಚನೆ ಆಗುತ್ತಿದ್ದು ಸ್ವತಃ ಅಮಿತ್ ಶಾ ಅವರೇ ಟಾಸ್ಕ್ ಟೆಸ್ಟ್ ಮಾಡುತ್ತಿದ್ದಾರೆ.
ನಡ್ಡಾ, ಮೋದಿ, ಶಾ ಹವಾ ಸೃಷ್ಟಿಗೆ ಪ್ಲ್ಯಾನ್ ಆಗಿದ್ದು, ಬಿಜೆಪಿಯಲ್ಲಿ ಒಳ ತಂತ್ರದ ಗೇಮ್ ಬಿರುಸುಗೊಂಡಿದೆ. ಜನವರಿ 5, 6 ಎರಡು ದಿನಗಳ ಕಾಲ ಜೆ.ಪಿ.ನಡ್ಡಾ ಎಲೆಕ್ಷನ್ ಟಾಸ್ಕ್ ಕೊಡಲು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ತುಮಕೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಸಾರ್ವಜನಿಕ ಸಮಾವೇಶ, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಷ್ಟೇ ಅಲ್ಲ ಮೂರು ಜಿಲ್ಲೆಗಳಲ್ಲಿ ವಿವಿಧ ಮಠಗಳಿಗೆ ಭೇಟಿ ಕೊಡುವ ನಡ್ಡಾ ವಿವಿಧ ಸಮುದಾಯಗಳ ಮೇಲೂ ಕಣ್ಣಿಟ್ಟಿದ್ದಾರೆ.
ಜನವರಿ 12ರಂದು ಯುವ ಜನೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯಲಿರುವ ಯುವಜನೋತ್ಸವದಲ್ಲಿ ಪ್ರಧಾನಿಯಿಂದ ಮೆಗಾ ಭಾಷಣ ಇರಲಿದ್ದು, ಯುವಕರನ್ನು ಸೆಳೆಯಲು ಸಹಕಾರಿ ಆಗಲಿದೆ ಎಂದು ರಾಜ್ಯ ಬಿಜೆಪಿ ನಂಬಿ ಕುಳಿತಿದೆ.