Select Your Language

Notifications

webdunia
webdunia
webdunia
webdunia

ನೂರಕ್ಕೆ ನೂರು ಶಿವಾಜಿನಗರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ- ಸಿಎಂ

ನೂರಕ್ಕೆ ನೂರು ಶಿವಾಜಿನಗರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ- ಸಿಎಂ
bangalore , ಸೋಮವಾರ, 2 ಜನವರಿ 2023 (14:49 IST)
ನಿಮ್ಮನೆಲ್ಲ ನೋಡಿ ತುಂಬಾ ಸಂತೋಷ ಆಗ್ತಾ ಇದೇ.ಎಲ್ಲಾ ತಾಯಂದಿರು ಕಾರ್ಯಕ್ರಮಕ್ಕೆ ಬಂದಿರುವುದು ಮತ್ತಷ್ಟು ಬಲ  ತಂದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
 
ಈ ವೇಳೆ ಮಾತನಾಡಿದ ಸಿಎಂ ಶಿವಾಜಿನಗರ ವಿಧಾನಸಭಾ ಕ್ಷೆತ್ರದಿಂದ  ನಮ್ಮ ವಿಜಯ ಸಂಕೇತ ಪ್ರಾರಂಭವಾಗಲಿದೆ.ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಈ ಕಾರ್ಯಕ್ರಮ ಮಾಡ್ತಾ ಇದೀವಿ.ರಾಜ್ಯಾಧ್ಯಕ್ಷರು ಕೇಳಿದ್ರು ಎಲ್ಲಿ ಇರ್ತೀರ ಅಂತಾ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಇದೇ ಅಂತ ಹೇಳಿದ್ರು .ಯಾವ ಕ್ಷೆತ್ರಕ್ಕೆ ಹೋಗ್ತೀರಾ ಅಂದ್ರು ನಾನು ಅತ್ಯಂತ ಕಷ್ಟ ಇದ್ದಂತ ಕ್ಷೇತ್ರ ಕೊಡಿ ಅಂತ ಕೇಳಿದೆ.ಶಿವಾಜಿನಗರ ಒಂದು ಕಾಲದಲ್ಲಿ ಬಿಜೆಪಿ ಗೆದ್ದಂತ ಸೀಟ್ ,ಚಿಕ್ಕಪೇಟೆಯಲ್ಲಿ ಈ ಹಿಂದೆ ಬಿಜೆಪಿ ಗೆದ್ದದಂತ ಸೀಟ್.ಇದರ ಅರ್ಥ ನೂರಕ್ಕೆ ನೂರು ಶಿವಾಜಿನಗರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ .ಶಿವಾಜಿನಗರಕ್ಕೆ ಹೆಚ್ಚಿನ ಸಮಯ ಕೊಡ್ತಿನಿ, ಶಿವಾಜಿನಗರ ಅಭಿರುದ್ದಿಗೆ ನಾನು ಯಾವಾಗಲು ಸಹಕಾರ ನೀಡ್ತೀನಿ ಎಂದು ಹೇಳಿದ್ರು.
 
ಕರ್ನಾಟಕದಲ್ಲಿ ನೂರಕ್ಕೆ ನೂರು ರಷ್ಟು ಬಿಜೆಪಿ ಅಧಿಕಾರಕ್ಕೆ ಬಂದೆ ಬರುತ್ತೆ.ಪ್ರತಿಯೊಂದು ಬೂತ್ ನಲ್ಲಿ ಎಲ್ಲಾ ಪದಾಧಿಕಾರಿಗಳ ಜತೆ ಸಭೆ ಕರಿಯೆಬೇಕು.ಪ್ರತಿಯೊಂದು ಬೂತ್ ನಲ್ಲಿ ಎಸ್ ಸಿ ಎಸ್ಟಿ ಮಹಿಳೆ ಮತ್ತು ಯುವಕರು ಮೋರ್ಚಾಗಳನ್ನು ಸ್ಥಾಪನೆ ಮಾಡಬೇಕು.ಕೀ  ವೋಟರ್ಸ್ ಒಳಗೊಂಡಂತೆ  ಪೇಜ್ ಕಮಿಟಿ ರಚನೆ ಮಾಡಬೇಕು.ಪ್ರತಿಯೊಂದು ಮನೆ ಮನೆಗೆ ಹೋಗಿ 4 ಬಾರಿ ಕೇಂದ್ರ ಸರ್ಕಾರದ ಸಾಧನೆ ಯನ್ನು,ಕಾಂಗ್ರೆಸ್ ನ  ವೈಫಲ್ಯವನ್ನು ಎಲ್ಲಾ ಜನರಿಗೆ ತಿಳಿಸಿಕೊಡಬೇಕು.ಭಾರತದ ಸುರಕ್ಷಿತ ಜೊತೆ ವಿಶ್ವ ಮಾನ್ಯ ಭಾರತ ಮಾಡಿದ್ದೂ ಪ್ರಧಾನಿ ಅವರೇ,ಸ್ಮಾರ್ಟ್ ಸಿಟಿ ಯೋಜನೆ ತಂದವರು ಪ್ರಧಾನಿ ಮೋದಿ.ಕಾಂಗ್ರೆಸ್ 10 ವರ್ಷ ಅಧಿಕಾರದಲ್ಲಿ  ಇದ್ರೂ ಒಂದು ಯೋಜನೆ ತಂದಿಲ್ಲ.ಸ್ಮಾರ್ಟ್ ಸಿಟಿಯಲ್ಲಿ ಆಗಿರುವಂತ ಕೆಲಸ ಅದು ಬಿಜೆಪಿಯಿಂದ ಮಾತ್ರ.ಉಳಿದಂತೆ ಶಾಸಕರು  ಈಗ ನಾವು ಮಾಡಿದ್ದೇವೆ ಅಂತ ಬೊಬ್ಬೆ ಹೊಡೀತಾರೆ.ಕೇವಲ ಲಾಭಗಳಿಸುವ ಕೆಲಸ ಮಾಡಿದ್ದಾರೆ ಅಷ್ಟೇ ,ವಿಪರೀತ ಮಳೆ ಬಂದಾಗಲೂ ರಸ್ತೆ ನಿರ್ವಹಣೆ ಮಾಡ್ತಾ ಇದೀವಿ.ಕಾಂಗ್ರೆಸ್ ಆಡಳಿತದಲ್ಲಿ ನೆನೆಗುಡಿಗೆ ಬಿದ್ದಂತ ಅಭಿರುದ್ದಿ ಕಾರ್ಯಕ್ರಮ ನಾವು ಮಾಡ್ತಾ ಇದೀವಿ.ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಾ ಇದೇ,ಇದುವರೆಗೂ ಕಾಂಗ್ರೆಸ್ ನಿಂದ ಯಾವುದೇ ಅಭಿರುದ್ದಿ ಹೊಂದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ರಾಜ್ಯದೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ- ಬೆಂಗಳೂರಿನಲ್ಲಿ ಸಂಭ್ರಮದ ಏಕಾದಶಿ