Select Your Language

Notifications

webdunia
webdunia
webdunia
webdunia

ಇಂದು ರಾಜ್ಯದೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ- ಬೆಂಗಳೂರಿನಲ್ಲಿ ಸಂಭ್ರಮದ ಏಕಾದಶಿ

Vaikuntha Ekadashi is celebrated all over the state today
bangalore , ಸೋಮವಾರ, 2 ಜನವರಿ 2023 (14:46 IST)
ಇಂದು ರಾಜ್ಯದೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ .ಹೀಗಾಗಿ ಇಸ್ಕಾನ್​ನಲ್ಲಿ ಅದ್ಧೂರಿಯ ವೈಕುಂಠ ಏಕಾದಶಿ ಆಚರಣೆ ಮಾಡಲಾಗಿದೆ.ಇಸ್ಕಾನ್ ದೇವಸ್ಥಾನದಲ್ಲಿ ರಾತ್ರಿ 3ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.ಕೊರೊನಾ ಆತಂಕದ ನಡುವೆಯೂ ವೈಕುಂಠ ಏಕಾದಶಿ ಸಂಭ್ರಮ ಮನಮಾಡಿದೆ.ಬೆಂಗಳೂರಿನ ಇಸ್ಕಾನ್ ನಲ್ಲಿ ಇಂದು ಒಂದು ಲಕ್ಷಕ್ಕು ಹೆಚ್ಚು ಭಕ್ತರ ದರ್ಶನ ಸಾಧ್ಯತೆ ಪಡೆಯುವ ಸಾಧ್ಯತೆ ಇದೆ.ಇಂದು ರಾತ್ರಿ 11  ರವರಗೂ ಇಸ್ಕಾನ್ ನಲ್ಲಿ ವಿಶೇಷ ಪೂಜೆಗಳು ನಡೆಯಲಿದೆ.ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ  ಭಕ್ತರು ಆಗಮಿಸಿದ್ದಾರೆ.
 
ಮಲ್ಲೇಶ್ವರಂನ ಟಿಟಿಡಿಯಲ್ಲಿಯೂ ವಿಶೇಷ ಪೂಜೆ ನೆರವೇರಿಸಲಾಗಿದೆ.ಶ್ರೀನಿವಾಸನಿಗೆ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ.ಕಬ್ಬು,ವಿವಿಧ ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿದ್ದು,ದೇವರ ದರ್ಶನ ಪಡೆದು  ಭಕ್ತರು ಪುನೀತರಾಗಿದ್ದಾರೆ.ಈ ಬಾರಿ 200 ರೂಪಾಯಿಯ ವಿಶೇಷ ದರ್ಶನ ಟಿಕೆಟ್ ವ್ಯವಸ್ಥೆ ಇದ್ದು,ಗೋವಿಂದನ ದರ್ಶನಕ್ಕೆ  ಭಕ್ತ ಸಾಗರ ಹರಿದು ಬರುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ