Publish Date: Mon, 02 Jan 2023 (13:06 IST)
Updated Date: Mon, 02 Jan 2023 (13:45 IST)
ಬೆಂಗಳೂರು : ಸಿದ್ದೇಶ್ವರ ಸ್ವಾಮೀಜಿಗಳನ್ನು ನಿನ್ನೆಯೇ ಅವರನ್ನು ಭೇಟಿ ಮಾಡಿದ್ದೆ, ಅವರು ನನ್ನನ್ನು ಗುರುತು ಹಿಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊದಿಗೆ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು. ಅವರನ್ನು ನಿನ್ನೆ ಭೇಟಿ ಮಾಡಿದ್ದೇನೆ.
ಯಾವುದೇ ಆತಂಕ ಬೇಡ. ಸ್ವಾಮೀಜಿಗಳು ತಮ್ಮ ಅಂತರ್ ಗತ ಶಕ್ತಿಯಿಂದ ಆರೋಗ್ಯ ಸುಧಾರಿಸಿ ಬರಲಿದ್ದಾರೆ ಎಂದು ತಿಳಿಸಿದರು.