Publish Date: Wed, 16 Sep 2020 (22:40 IST)
Updated Date: Wed, 16 Sep 2020 (22:42 IST)
ತಹಸೀಲ್ದಾರ್ ಒಬ್ಬರು ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಘಟನೆ ವರದಿಯಾಗಿದೆ.
ಕಲಬುರಗಿ ಜಿಲ್ಲೆಯ ಗಣಾಪೂರ ಗ್ರಾಮದ ಹತ್ತಿರದ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಚಿಂಚೋಳಿಯ ಹಿಂದಿನ ತಹಸೀಲ್ದಾರ ಪಂಡಿತ ಬಿರಾದಾರ್ ರವರ ಕಾರು ಹಳ್ಳದಲ್ಲಿ ಹರಿದು ಹೋಗಿದೆ.
ತಹಸೀಲ್ದಾರ್ ಅವರು ಮರವೇರಿ ಕುಳಿತಿದ್ದಾರೆ ಎನ್ನಲಾಗಿದೆ. ಭಾರೀ ಮಳೆಯಿಂದಾಗಿ ಹಳ್ಳದಲ್ಲಿ ನೀರು ಬಂದಿತ್ತು.
ತಹಸೀಲ್ದಾರ್ ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದ್ದು, ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿಯು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.