ಬೆಂಗಳೂರು: ಹನುಮ ಜಯಂತಿಗೆ ನಾಟಿ ಕೋಳಿ ಸಾರು ತಿಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯರನ್ನು ಕಾಲೆಳೆದ ಬಿಜೆಪಿ ಶಾಸಕ ಸುರೇಶ್ ಕುಮಾರ್ ರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ನಿನ್ನೆ ಹನುಮ ಜಯಂತಿಯಿತ್ತು. ಇದೇ ದಿನ ಡಿಕೆ ಶಿವಕುಮಾರ್ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲಾಗಿತ್ತು. ಉಪಹಾರಕ್ಕೆ ಡಿಕೆಶಿ ಸ್ಪೆಷಲ್ ಆಗಿ ನಾಟಿ ಕೋಳಿ ಸಾರು, ನಾಟಿ ಕೋಳಿ ಫ್ರೈ ಮಾಡಿಸಿದ್ದರು.ಇದಕ್ಕೆ ಸುರೇಶ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯ ಮಾಡಿದ್ದರು.
ಹನುಮ ಜಯಂತಿಯಂದು ನಾಟಿ ಕೋಳಿ ಸಾರು - ಬ್ರೇಕ್ ಫಾಸ್ಟ್ . ಇದೇ ಇಂದಿನ ವಿಶೇಷ. Guest - Non Veg. Host - Pure Veg. ಮತ್ತೊಂದು ವಿಶೇಷ. ರಾಜ್ಯದ ನಾಗರಿಕರಿಗೆ ಪುಕ್ಕಟೆ ಮನರಂಜನೆ ಮುಂದುವರಿಯುವುದು.. ಖಚಿತ ಎಂದು ಸುರೇಶ್ ಕುಮಾರ್ ವ್ಯಂಗ್ಯ ಮಾಡಿದ್ದರು.
ಇದಕ್ಕೆ ನೆಟ್ಟಿಗರು ತೀವ್ರ ಟೀಕೆ ಮಾಡಿದ್ದಾರೆ. ಆಹಾರ ಅವರವರ ಆಯ್ಕೆ. ನಮ್ಮೂರಿನಲ್ಲಿ ಆಂಜನೇಯನಿಗೆ ಬಾಡೂಟ ನೈವೇದ್ಯ ಮಾಡಲಾಗುತ್ತದೆ. ಇನ್ನು, ಮನುಷ್ಯರು ತಿಂದರೆ ಏನು ತಪ್ಪು ಎಂದಿದ್ದಾರೆ. ಇನ್ನು ಕೆಲವರು ಇನ್ನು ಮುಂದೆ ರಾಜ್ಯಕ್ಕೆ ಒಬ್ಬ ವೆಜಿಟೇರಿಯನ್ ಸಿಎಂ ಬೇಕು ಎಂದು ಬೇಡಿಕೆ ಇಡೋದು ಒಳ್ಳೆಯದು ಎಂದು ಟ್ರೋಲ್ ಮಾಡಿದ್ದಾರೆ.