ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಹುದ್ದೆಗಾಗಿ ಪೈಪೋಟಿಗೆ ಬ್ರೇಕ್ ನೀಡಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇದೀಗ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಡಿಕೆ ಶಿವಕುಮಾರ್ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಬಗ್ಗೆ ಜೆಡಿಎಸ್ ವ್ಯಂಗ್ಯ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಡಮ್ಮಿ ಸಿಎಂ ಸಿದ್ದರಾಮಯ್ಯ ಕುರ್ಚಿ ಆಸೆಗೆ ಡಿಕೆ ಶಿವಕುಮಾರ್ ಜತೆ ಸೆಟಲ್‌ಮೆಂಟ್‌ಗೆ ಬಂದ ಸಿದ್ದಹಸ್ತ !
ಸಿದ್ದರಾಮಯ್ಯ: ಶಿವಕುಮಾರ್ ಈಗ್ಲೂ ನೀನೇ ಸೂಪರ್ ಸಿಎಂ ಕಣಯ್ಯ. ನೀನೆಷ್ಟೆ ಕಮಿಷನ್ ತಗೊಂಡ್ರು ನಾನ್ಯಾವತ್ತಾದ್ರೂ ಅಡ್ಡಿ ಮಾಡಿದಿನಾ ?
ಡಿಕೆಶಿ: ಅದು ಹಾಗಲ್ಲ ಸರ್. ನೀವ್ ಕೊಟ್ಟ ಮಾತು..
ಸಿದ್ದರಾಮಯ್ಯ: ಏಯ್ ಕೇಳಪ್ಪ ಇಲ್ಲಿ. ಸಂಪುಟದಲ್ಲಿ ನೀನು ಯಾರ್ ಹೇಳ್ತೀಯೋ ಅವ್ರೆ ಮಂತ್ರಿ. ಈಗ ನಡೀ.. ಪ್ರೆಸ್ ಮುಂದೆ ನಾವಿಬ್ಬರು ಅಣ್ತಮ್ಮ ಅಂತ ಹೇಳಿದ್ಯಲ್ಲ. ಹಂಗೇ ನಡ್ಕೋ.
ಇಷ್ಟೇ ಇವರಿಬ್ಬರ ನಡುವಿನ ಬ್ರೇಕ್ ಫಾಸ್ಟ್ ಮೀಟಿಂಗ್ ಕಥೆ.