Publish Date: Fri, 15 Nov 2019 (10:20 IST)
Updated Date: Fri, 15 Nov 2019 (10:22 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ಮಾತಿಗೆ ಮಣೆ ಹಾಕಿದ ಆರ್.ಶಂಕರ್ ವಿರುದ್ಧ ಅವರ ಬೆಂಬಲಿಗರು ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್.ಶಂಕರ್ ಗೆ ಬಿಜೆಪಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಅವರು ಬೆಂಬಲಿಗರು ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಆದರೆ ಸಿಎಂ ಭೇಟಿ ಮಾಡಿದ ಬಳಿಕ ಆರ್.ಶಂಕರ್ ತಮ್ಮ ಮಾತಿನ ವರಸೆ ಬದಲಿಸಿದ್ದು, ಟಿಕೆಟ್ ಸಿಗದಿದ್ದರೂ ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ.
ಅವರ ಈ ಹೇಳಿಕೆ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಸಿಎಂ ಮನೆಯ ಒಳಗೆ ಹೋಗುವಾಗ ಒಂದು ಮಾತಾಡ್ತಾರೆ. ಹೊರಗೆ ಬಂದು ಮತ್ತೊಂದು ಮಾತಾಡ್ತಾರೆ. ನಿಮಗೆ ಅನ್ಯಾಯ ಆಗಿದೆ ಅಂತಾ ನಾವು ಪ್ರತಿಭಟನೆ ಮಾಡಿದ್ರೆ. ನೀವು ಯಡಿಯೂರಪ್ಪ ಬಳಿ ಹೋಗಿ ಒಪ್ಪಿಕೊಂಡು ಬಂದ್ರಾ? ಈಗ ನಿಮ್ಮ ಮಾತನ್ನು ಬದಲಾಯಿಸುತ್ತಿದ್ದೀರಾ . ಇನ್ನು ಮುಂದೆ ನಿಮ್ಮ ಬೆಂಬಲಕ್ಕೆ ನಿಲ್ಲಲ್ಲ ಎಂದು ಆರ್. ಶಂಕರ್ ಗೆ ಘೇರಾವ್ ಹಾಕಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.