Publish Date: Fri, 15 Nov 2019 (09:58 IST)
Updated Date: Fri, 15 Nov 2019 (10:01 IST)
ಬೆಂಗಳೂರು : ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ರಾಣಿ ಬೆನ್ನೂರು ಕ್ಷೇತ್ರದ ಶಾಸಕರಾಗಿದ್ದ ಆರ್.ಶಂಕರ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಆರ್ ಶಂಕರ್, ಚುನಾವಣೆಗೆ ಸ್ಪರ್ಧಿಸುವುದರ ಕುರಿತು ಚರ್ಚೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮಾತಿಗೆ ಒಪ್ಪಿದ್ದೇನೆ. ಯಾರಿಗೆ ಟಿಕೆಟ್ ಕೊಟ್ರು ಕೆಲಸ ಮಾಡ್ತೀನಿ. ಸಿಎಂ ಮಂತ್ರಿ ಮಾಡೋ ಭರವಸೆ ನೀಡಿದ್ದಾರೆ. ಸಿಎಂ ಮಾತು ಒಪ್ಪಿ ಎಂಎಲ್ ಸಿ ಆಗುತ್ತೇನೆ ಎಂದು ತಿಳಿಸಿದ್ದಾರೆ.