ಬೆಂಗಳೂರು: ಇನ್ನೇನು ದೀಪಾವಳಿ ಹಬ್ಬ ಬಂದೇ ಬಿಟ್ಟಿತು. ಜನ ಬಟ್ಟೆ-ಬರೆ, ಪಟಾಕಿ, ದೀಪಗಳ ಖರೀದಿಗೆ ಮುಗಿಬೀಳುವುದು ಸಾಮಾನ್ಯ.
ಆದರೆ ಇತ್ತೀಚೆಗೆ ಎಲ್ಲವೂ ಡಿಜಿಟಲ್ ಆದ ಮೇಲೆ ನಾವು ಎಲ್ಲವನ್ನೂ ಆನ್ ಲೈನ್ ನಲ್ಲೇ ಖರೀದಿ ಮಾಡುವ ಟ್ರೆಂಡ್ ಗೆ ಒಗ್ಗಿಹೋಗಿದ್ದೇವೆ. ಆದರೆ ಇದರಿಂದ ನಮ್ಮ ದೇಸೀ ಮಾರುಕಟ್ಟೆಗೆ ಹೊಡೆತ ಬೀಳುತ್ತಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ದೇಸೀ ಮಾರುಕಟ್ಟೆಯನ್ನು ಉತ್ತೇಜಿಸಿ ಎಂದು ಕರೆಕೊಟ್ಟಿದ್ದರು.
ಆನ್ ಲೈನ್ ಖರೀದಿ ಮಾಡಿ ಯಾವುದೋ ಮಲ್ಟಿ ನ್ಯಾಷನಲ್, ವಿದೇಶೀ ಕಂಪನಿಯನ್ನು ಉದ್ದಾರ ಮಾಡುವುದಕ್ಕಿಂತ ನಮ್ಮ ದೇಸೀ ವ್ಯಾಪಾರಿಗಳ ಜೇಬು ತುಂಬಿಸುವ ಕೆಲಸ ಮಾಡೋಣ. ಆ ಮೂಲಕ ದೀಪಾವಳಿ ಹಬ್ಬದ ಅಂಗವಾಗಿ ನಮ್ಮ ವ್ಯಾಪಾರಿಗಳಿಗೆ ಉತ್ತೇಜನ ಕೊಡುವ ಕೆಲಸ ಮಾಡೋಣ.