Select Your Language

Notifications

webdunia
webdunia
webdunia
webdunia

ಪಕ್ಷದ ತೀರ್ಮಾನ ಮುಖ್ಯವಲ್ಲ ಅಂತ ಸುಮಲತಾ ಬಾಂಬ್ ಸಿಡಿಸಿದ್ಯಾಕೆ?

ಪಕ್ಷದ ತೀರ್ಮಾನ ಮುಖ್ಯವಲ್ಲ ಅಂತ ಸುಮಲತಾ ಬಾಂಬ್ ಸಿಡಿಸಿದ್ಯಾಕೆ?
ಮಂಡ್ಯ , ಗುರುವಾರ, 28 ಫೆಬ್ರವರಿ 2019 (17:45 IST)
ಲೋಕಸಭೆ ಚುನಾವಣೆಗೆ ಹೈಟೆನ್ಶನ್ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪ್ರವಾಸ ಕೈಗೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಮುತ್ತೆಗೆರೆಯಲ್ಲಿ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದು, ಜನಾಭಿಪ್ರಾಯ ಸಂಗ್ರಹಕ್ಕಾಗಿ ಪ್ರವಾಸ ಮಾಡುತ್ತಿದ್ದೇನೆ. ಹಂಡ್ರೆಡ್ ಪರ್ಸೆಂಟ್ ಒಳ್ಳೆ ರೆಸ್ಪಾನ್ಸ್ ಇದೆ. ಹೋದ ಕಡೆಯಲ್ಲಾ ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ನಾನು ಪಕ್ಷದ ತೀರ್ಮಾನಕ್ಕಿಂತ ಜನಾಭಿಪ್ರಾಯಕ್ಕೆ ಆದ್ಯತೆ ನೀಡುತ್ತೇನೆ ಎಂದಿದ್ದಾರೆ.

ಪರೋಕ್ಷವಾಗಿ ಸ್ಪರ್ಧೆ ಖಚಿತ ಪಡಿಸಿದ ಸುಮಲತಾ, ಕೆಲವು ರಾಜ್ಯ ನಾಯಕರು ಪಾಸಿಟಿವ್ ಆಗಿದ್ದಾರೆ. ಇನ್ನು ಕೆಲವರು ಬೇರೆ ಕ್ಷೇತ್ರ ಆಯ್ದುಕೊಳ್ಳಿ ಅಂತಿದ್ದಾರೆ. ಆದರೆ ನಾನು ಸ್ಪರ್ಧೆ ಮಾಡುವುದಾದರೆ ಮಂಡ್ಯದಿಂದ ಮಾತ್ರ ಎಂದರು.

ಮಂಡ್ಯದ ಪ್ರತಿಯೊಬ್ಬರ ಮನದಲ್ಲೂ ಅಂಬರೀಶ್‌ಗೆ‌ ಜಾಗ ನೀಡಿದ್ದಾರೆ. ಮನೆ ಮಾಡಲೇಬೇಕು ಅಂತ ಏನು ತೀರ್ಮಾನಿಸಿಲ್ಲ ಎಂದರು. ಅನುಕಂಪದ ಮಾತಿಗೆ ಮರುಳಾಗಬೇಡಿ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದ ದಾಳಿಯ ಹಿನ್ನಲೆ; ಕಾರವಾರ ಬಂದರಿನಲ್ಲಿ ಹೈ ಅಲರ್ಟ್