ರಾಹುಲ್ ಗಾಂಧಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆದ ಮೇಲೆ ಈಗ ಸುಮಲತಾ ಅಂಬರೀಶ್ ಟೆಂಪಲ್ ರನ್ ಮಾಡುತ್ತಿದ್ದಾರೆ.
ಮಂಡ್ಯದಲ್ಲಿ ನಾಳೆ ಮತ್ತೆ ಸುಮಲತಾ ಟೆಂಪಲ್ ರನ್ ನಡೆಸಲಿದ್ದು, ಇದೇ ವೇಳೆ ರಾಜಕೀಯ ಗಣ್ಯರ ಮನೆಗೆ ಭೇಟಿ ನೀಡಲಿದ್ದಾರೆ.
ಸುಮಲತಾ ಅಂಬರೀಷ್ ಮಂಡ್ಯ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ನಾಳೆ ಬೆಳಿಗ್ಗೆ ಮುತ್ತೇಗೆರೆ ಗ್ರಾಮದ ಮನೆ ದೇವರು ಮಾಯಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡಲಿದ್ದಾರೆ.
ಮಂಡ್ಯ ಜಿಲ್ಲೆಯ ಹಿರಿಯ ರಾಜಕೀಯ ನಾಯಕರಾದ ಜಿ.ಮಾದೇಗೌಡ, ಎಂ.ಎಸ್.ಆತ್ಮಾನಂದ, ಎಚ್.ಡಿ.ಚೌಡಯ್ಯ ಮನೆಗಳಿಗೆ ಭೇಟಿ ನೀಡಿ, ಮಾರ್ಗದರ್ಶನ, ಸಲಹೆ ಪಡೆಯಲಿದ್ದಾರೆ.
ಬಳಿಕ ದೊಡ್ಡರಸಿನಕೆರೆ ಅಂಬಿ ಪುತ್ತಳಿ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಸುಮಲತಾ ಭಾಗವಹಿಸಲಿದ್ದಾರೆ. ಇಡೀ ದಿನ ಕ್ಷೇತ್ರ ಪರ್ಯಟನೆ ನಡೆಸಲಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!