Publish Date: Fri, 29 Mar 2019 (13:33 IST)
Updated Date: Fri, 29 Mar 2019 (13:34 IST)
ಮಂಡ್ಯದಲ್ಲಿ ಹೈವೋಲ್ಟೇಜ್ ಚುನಾವಣೆ ಕಾವು ಜೋರಾಗುತ್ತಿದೆ. ಕಣದಲ್ಲಿರುವ ಅಭ್ಯರ್ಥಿಗಳು ಆರೋಪಗಳಲ್ಲಿ ತೊಡಗಿದ್ದರೆ, ಅವರ ಬೆಂಬಲಿಗರು ಕೇಸ್ ಮೇಲೆ ಕೇಸ್ ಹಾಕಲು ಶುರುವಿಟ್ಟುಕೊಂಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸೂಕ್ತ ದಾಖಲೆ ಸಲ್ಲಿಸದ ಹಿನ್ನಲೆಯಲ್ಲಿ ಸುಮಲತಾ ಬೆಂಬಲಿಗರು ಗರಂ ಆಗಿದ್ದು, ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ ದಾಖಲಾತಿ ಕೇಳಿರುವ ಸುಮಲತಾ ಬೆಂಬಲಿಗ ಆನಂದ್, ಚುನಾವಣಾ ಅಧಿಕಾರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ದೂರಿಗೆ ಸರಿಯಾಗಿ ಸ್ಪಂದಿಸದ ಅಧಿಕಾರಿ ವಿರುದ್ಧ ಈಗ ಹೈಕೋರ್ಟ ಮೊರೆ ಹೋಗಲು ತೀರ್ಮಾನ ಮಾಡಿದ್ದಾರೆ.