Select Your Language

Notifications

webdunia
webdunia
webdunia
Friday, 11 April 2025
webdunia

ನಾಲ್ಕು ವೋಟರ್ ಐಡಿ ಹೊಂದಿದ ಹಿನ್ನಲೆಯಲ್ಲಿ ಪ್ರಕಾಶ್ ರೈ ವಿರುದ್ಧ ದೂರು ದಾಖಲು

ವೋಟರ್ ಐಡಿ
ಬೆಂಗಳೂರು , ಗುರುವಾರ, 28 ಮಾರ್ಚ್ 2019 (12:36 IST)
ಬೆಂಗಳೂರು : ನಾಲ್ಕು ವೋಟರ್ ಐಡಿ ಹೊಂದಿದ ಹಿನ್ನಲೆಯಲ್ಲಿ ನಟ, ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಅವರ ವಿರುದ್ದ  ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.


ಪ್ರಕಾಶ್ ರೈ ತೆಲಂಗಾಣದಲ್ಲಿ ಒಂದು, ತಮಿಳುನಾಡಿನಲ್ಲಿ ಎರಡು ವೋಟರ್ ಐಡಿಯನ್ನು ಹೊಂದಿದ್ದಾರೆ. ಇದಲ್ಲದೇ ನಾಮಪತ್ರದ ಘೋಷಣಾ ಪತ್ರದಲ್ಲಿ ತನ್ನ ಹೆಸರು ಶಾಂತಿನಗರ ವೋಟರ್ ಲಿಸ್ಟ್ ನಲ್ಲಿದೆ ಎಂದು ಹೇಳಿದ್ದರು. ಈ ಸುಳ್ಳು ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನಟ ಪ್ರಕಾಶ್ ರೈ ಸಲ್ಲಿಸಿದ್ದಾರೆ ಎಂದು ಆರೋಪಿಸಿ ವಕೀಲ ಜಗನ್ ಕುಮಾರ್ ಎನ್ನುವವರು ಪ್ರಕಾಶ್ ರೈ ಅವರ ವಿರುದ್ದಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.


ಈ ಕುರಿತು  ಮಾಧ್ಯಮಗಳ ಜೊತೆ ಮಾತನಾಡಿರುವ ವಕೀಲ ಜಗನ್ ಕುಮಾರ್,’ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಹೊಂದುವುದು ಕಾನೂನು ಪ್ರಕಾರ ಅಪರಾಧ. ಕೂಡಲೇ ಅವರ ಉಮೇದುವಾರಿಕೆಯನ್ನು ರದ್ದು ಮಾಡಬೇಕು ಅಂತ ಆಯೋಗವನ್ನು ಒತ್ತಾಯಿಸಿರುವೆ ಎಂದು  ಹೇಳಿದ್ದಾರೆ.


.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಟಿ ದಾಳಿಗೂ, ನನಗೂ ಯಾವುದೇ ಸಂಬಂಧ ಇಲ್ಲ - ಪುಟ್ಟರಾಜು ಆರೋಪಕ್ಕೆ ತಿರುಗೇಟು ನೀಡಿದ ಸುಮಲತಾ