Publish Date: Fri, 23 Dec 2022 (11:09 IST)
Updated Date: Thu, 22 Dec 2022 (23:39 IST)
ಬೆಳಗಾವಿ : ಎಸಿ ಇರುವ ಕ್ಲೋಸ್ ಡೋರ್ ಕೊಠಡಿಗಳಲ್ಲಿ ಮಾಸ್ಕ್ ಬಳಕೆ ಮಾಡಬೇಕು ಜೊತೆಗೆ ಮೂರನೇ ಡೋಸ್ನ್ನು ಎಲ್ಲರೂ ಪಡೆಯಬೇಕು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದರು.
ಸಿಎಂ ನೇತೃತ್ವದ ಕೋವಿಡ್ ಸಭೆ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಗತಿಕ ಕೋವಿಡ್ ಸ್ಥಿತಿಗತಿಯ ವರದಿಯನ್ನು ತಾಂತ್ರಿಕಾ ಸಲಹಾ ಸಮಿತಿ ಇಂದು ಕೊಟ್ಟಿದೆ.
ಸಭೆಯಲ್ಲಿ ಐಎಲ್ಐ ಮತ್ತು ಸಾರಿ ಇರುವ ಎಲ್ಲಾ ಪ್ರಕರಣಗಳಿಗೂ ಕಡ್ಡಾಯ ತಪಾಸಣೆಗೆ ನಿರ್ಧಾರಿಸಿದ್ದು, ಎಸಿ ಇರುವ ಕ್ಲೋಸ್ ಡೋರ್ ಕೊಠಡಿಗಳ ಕಡೆ ಮಾಸ್ಕ್ ಬಳಕೆ ಮಾಡಬೇಕು ಎಂದು ತಿಳಿಸಿದರು.
ವಿದೇಶದಿಂದ ಬರುವ ಪ್ರಯಾಣಿಕರಿಗೆ ಟೆಸ್ಟ್ ಮಾಡಲಾಗುವುದು ಜೊತೆಗೆ ಕೇಂದ್ರ ಮಾರ್ಗಸೂಚಿ ಅನ್ವಯ ಟೆಸ್ಟ್ ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ಗಳ ಸಿದ್ಧತೆ ಆರಂಭವಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ಗೆ ಬೆಡ್ ಮೀಸಲು ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್ ಮೀಸಲಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.