Select Your Language

Notifications

webdunia
webdunia
webdunia
webdunia

ಮೆಟ್ರೋದಲ್ಲಿ ಈಗಲೂ ಮಾಸ್ಕ್ ಕಡ್ಡಾಯದಿಂದ ಪ್ರಯಾಣಿಕರಿಗೆ ಕಿರಿ ಕಿರಿ

Masks are still compulsory for passengers in the metro
bangalore , ಸೋಮವಾರ, 21 ನವೆಂಬರ್ 2022 (19:41 IST)
ಇಡೀ ವಿಶ್ವವನ್ನೇ ಹಾಡಿದ್ದ ಕೊರೊನಾ ಸೋಂಕು ಸದ್ಯ ಜನರಲ್ಲಿ ಬೆರತು ಹೋಗಿದ್ದು ಕೂರೋನಾ ಕಾಲದ ಎಲ್ಲಾ ನಿಯಮವನ್ನು ಸರ್ಕಾರ ಬದಿಗಿಟ್ಟಿದೆ. ಮಾಸ್ಕ್, ಸಾಮಾಜಿಕ ಅಂತರ ಎಲ್ಲಾ  ಮರೆಯಾಗಿದೆ. ಹೀಗಿದ್ದೂ ಬೆಂಗಳೂರಿನಲ್ಲಿ ನಮ್ಮ ಮಟ್ರೋ ಮಾತ್ರ ಕೊರೊನಾ ರೂಲ್ಸ್ ಗಳನ್ನ ಫಾಲೋ ಮಾಡ್ತಿದೆ. ಮೆಟ್ರೋದಲ್ಲಿ ಈಗಲೂ ಮಾಸ್ಕ್ ಕಡ್ಡಾಯವಾಗಿದ್ದು ಜನರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ. ಎಲ್ಲೂ ಇಲ್ಲದ ಮಾಸ್ಕ್ ಅನ್ನು ಮೆಟ್ರೋಗಾಗಿ ಕ್ಯಾರಿ ಮಾಡೋ ಪರಿಸ್ಥಿತಿ ಉಂಟಾಗಿದೆ. ಒಂದು ವೇಳೆ ಮಾಸ್ಕ್ ಮರೆತು ಬಂದಿದ್ರೆ ಮತ್ತೆ ಹೋಗಿ ಕೊಳ್ಳೋ ಪರಿಸ್ಥಿತಿಯಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ನಿಗಮ ಮಾತ್ರ ಈಗಲೂ ತನ್ನ ನಿರ್ಧಾರವನ್ನ ಸಮರ್ಧಿಸಿಕೊಳ್ತಿದೆ. ನೆಗಡಿ ಕೆಮ್ಮು ಇದ್ದವರು ಮಾಸ್ಟ್ ಹಾಕಿದ್ರೆ ಒಳಿತು, ಎಲ್ಲರಿಗೂ ಮಾಸ್ಕ್ ಅಗತ್ಯವಿಲ್ಲ ಎಂದು ವೈದ್ಯರೇ ಹೇಳಿದ್ದಾರೆ ಅದರೂ ಮೆಟ್ರೋ ನಿಗರು ಮಾತ್ರ ಮಾಸ್ಕ್ ಹಾಕದವರಿಗೆ ಈಗಲೂ ಎಂಟ್ರಿ ಕೊಡದೆ, ನಿತ್ಯವೂ ಪ್ರಯಾಣಿಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರಿಗೂ ಸಿಗದ ಶಂಕಿತನ ಮಾಹಿತಿ -ಡಿಸಿಪಿ ಭೀಮಾಶಂಕರ್ ಗುಳೇದ್