Select Your Language

Notifications

webdunia
webdunia
webdunia
webdunia

ನಮ್ಮ ಮೆಟ್ರೋ ದಶ ದಿಕ್ಕುಗಳಿಗೆ ವಿಸ್ತಾರ

Expansive to our metro ten directions
bangalore , ಶನಿವಾರ, 5 ನವೆಂಬರ್ 2022 (15:58 IST)
ರಾಜಧಾನಿಯ ದಶ ದಿಕ್ಕುಗಳಿಗೂ 'ನಮ್ಮ ಮೆಟ್ರೋ' ಜಾಲ ವಿಸ್ತರಿಸುತ್ತಿದ್ದು, ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗವೂ ಮೆಟ್ರೋ ರೈಲು ಸಂಚಾರಕ್ಕೆ ಸಿದ್ಧವಾಗುತ್ತಿದೆ. ನಿಲ್ದಾಣ ನಿರ್ಮಾಣ ಮತ್ತು ಇತರೆ ಕಾಮಗಾರಿಗಳು ಶೇ. 90ರಷ್ಟು ಪೂರ್ಣಗೊಂಡಿದ್ದು, ಹಳಿ ಜೋಡಣೆ ಕೆಲಸ ಭರದಿಂದ ಸಾಗಿದೆ. ಮೆಟ್ರೋ ಎರಡನೇ ಹಂತದ ಯೋಜನೆಯಡಿ ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗೆ 18.82 ಕಿ.ಮೀ ಉದ್ದದ ಮಾರ್ಗವನ್ನು ನಿರ್ಮಿಸಲಾಗಿದೆ. ಇದಕ್ಕೆ ಹಳದಿ ಬಣ್ಣದ ಮಾರ್ಗವೆಂದು ಹೆಸರಿಡಲಾಗಿದೆ. ಒಟ್ಟು ಮೂರು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಸಿವಿಲ್‌ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, 2023ರ ಜೂನ್‌ ವೇಳೆಗೆ ವಾಣಿಜ್ಯ ಸಂಚಾರ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಟ್ಯಾಟೋ ಹಾಕಿಸಿಕೊಂಡಿದೀರಾ..? ಹಾಗಾದ್ರೇ ಎಚ್ಚರ ಎಚ್ಚರ