Select Your Language

Notifications

webdunia
webdunia
webdunia
webdunia

ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ

ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ
bangalore , ಭಾನುವಾರ, 25 ಸೆಪ್ಟಂಬರ್ 2022 (20:12 IST)
ಕೋವಿಡ್‌ನಿಂದ ಗಣನೀಯವಾಗಿ ತಗ್ಗಿದ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗುತ್ತಿದೆ. ಕೋವಿಡ್‌ ಪೂರ್ವದಲ್ಲಿ ನಮ್ಮ ಮೆಟ್ರೊದಲ್ಲಿ ಪ್ರತಿದಿನ ಸರಾಸರಿ 4 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು, ಕೋವಿಡ್‌ ನಂತರ ಈ ಸಂಖ್ಯೆ 2 ಲಕ್ಷಕ್ಕೆ ಇಳಿಕೆಯಾಯಿತು. ಸದ್ಯ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಪ್ರತಿ ದಿನ ಸರಾಸರಿ 5 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದಾರೆ. 2022ರ ಆಗಸ್ಟ್‌ನಲ್ಲಿ ಒಟ್ಟು 1.52 ಕೋಟಿ ಜನರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು, 36.66 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಜುಲೈ ತಿಂಗಳಲ್ಲಿ 1.45 ಕೋಟಿ ಜನರು ಪ್ರಯಾಣ ಮಾಡಿದ್ದು, 35.62 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ನಾಲ್ಕು ತಿಂಗಳಿಂದ ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದ್ದು, BMRCL ಆದಾಯವೂ ಮತ್ತೆ ಹಳಿಗೆ ಮರಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 2 ದಿನ ಮಳೆ ಸಾಧ್ಯತೆ