Select Your Language

Notifications

webdunia
webdunia
webdunia
webdunia

ನಮ್ಮ ಮೆಟ್ರೋದಲ್ಲಿ ಇನ್ಮುಂದೆ ಕ್ಯೂಆರ್ ಕೋಡ್ ಟಿಕೆಟ್​ ವ್ಯವಸ್ಥೆ..!

ನಮ್ಮ ಮೆಟ್ರೋದಲ್ಲಿ ಇನ್ಮುಂದೆ  ಕ್ಯೂಆರ್ ಕೋಡ್ ಟಿಕೆಟ್​ ವ್ಯವಸ್ಥೆ..!
bangalore , ಶನಿವಾರ, 27 ಆಗಸ್ಟ್ 2022 (13:47 IST)
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಹಾಯವಾಗುವಂತಹ ಹತ್ತು ಹಲವು ವಿನೂತನ ಯೋಜನೆಗಳನ್ನು ಬಿಎಂಆರ್​​​​​ಸಿಎಲ್​​​  ಜಾರಿ ಮಾಡುತ್ತಾ ಬಂದಿದೆ. ಸದ್ಯ ಮತ್ತೊಂದು ಹೊಸ ಯೋಜನೆ ಜಾರಿ ಮಾಡಲು ನಮ್ಮ ಮೆಟ್ರೋ ಮುಂದಾಗಿದ್ದು, ಮುಂದಿನ ತಿಂಗಳ ಅಂತ್ಯಕ್ಕೆ ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್​ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಈಗಾಗಲೇ ಟೋಕನ್​, ಸ್ಮಾರ್ಟ್ ಕಾರ್ಡ್ ಮತ್ತು ಪಾಸ್​ನ್ನು ಬಳಸಿ ಪ್ರಯಾಣಿಸಲು ನಮ್ಮ ಮೆಟ್ರೋ ಅವಕಾಶ ಕಲ್ಪಿಸಿದೆ. ಈಗ ಇನ್ನೊಂದು ಹೊಸ ಮಾದರಿಯ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ನಮ್ಮ ಮೆಟ್ರೋದಲ್ಲಿ ಟಿಕೆಟ್​​​ಗಾಗಿ ಉದ್ದುದ್ದ ಸಾಲಿನಲ್ಲಿ ನಿಂತುಕೊಳ್ಳಬೇಕಾಗಿತ್ತು. ಆದರೆ ಇನ್ಮುಂದೆ ನಿಮ್ಮ ಮೊಬೈಲ್ ಮೂಲಕವೇ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಮೆಟ್ರೋ ನಿಗಮ ಮಾಡುತ್ತಿದೆ. ಈ ಕ್ಯೂ ಆರ್ ಕೋಡ್​ ಆಧಾರಿತ ಟಿಕೆಟ್​ ವ್ಯವಸ್ಥೆಯಿಂದ ಚಿಲ್ಲರೆ ನೀಡುವ ಸಮಸ್ಯೆಯೂ ದೂರವಾಗಲಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಉಪಕರಣ ಮತ್ತು  ವ್ಯವಸ್ಥೆಯನ್ನು ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸಲಾಗ್ತಿದೆ. ಮುಂದಿನ ಕೆಲ ದಿನಗಳಲ್ಲಿ ವ್ಯವಸ್ಥೆಯ ಪರೀಕ್ಷೆ ನಡೆಯಲಿದ್ದು, ಎಲ್ಲವೂ ಸರಾಗವಾಗಿ ಸಾಗಿದರೆ ಸೆಪ್ಟೆಂಬರ್ ಅಂತ್ಯಕ್ಕೆ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರಿ ಮಳೆಗೆ ರಾಜ್ಯ ರಾಜಧಾನಿ ತತ್ತರ