Select Your Language

Notifications

webdunia
webdunia
webdunia
webdunia

ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಕಬ್ಬುಬೆಳೆಗಾರರ ಎಚ್ಚರಿಕೆ

ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಕಬ್ಬುಬೆಳೆಗಾರರ ಎಚ್ಚರಿಕೆ
bangalore , ಗುರುವಾರ, 15 ಡಿಸೆಂಬರ್ 2022 (18:55 IST)
ಕಬ್ಬು ಬೆಳೆಗಾರರ ಹೋರಾಟ 24 ನೇ ದಿನಕ್ಕೆ ಕಾಲಿಟ್ಟಿದ್ದು, ಫ್ರೀಡಂಪಾರ್ಕ್ ನಲ್ಲಿ ರೈತರ ಮುಷ್ಕರ ನಡೆಯುತ್ತಿದೆ.ಕಬ್ಬು ಬೆಳೆಗೆ ದರ ನಿಗದಿ ಮಾಡುವಂತೆ ರೈತರು ಧರಣಿ ನಡೆಸುತ್ತಿದ್ದು,ಇಂದು ಮೌನ ಧರಣಿ ಮಾಡುವುದರ ಮೂಲಕ ರೈತರು ಪ್ರತಿಭಟನೆ ಮಾಡಿದ್ದಾರೆ.ಕಬ್ಬಿನ ಬೆಂಬಲ ಬೆಲೆ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದು,ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮುಷ್ಕರ ನಡೆಸಲಾಗ್ತಿದೆ.ಕಬ್ಬು ಬೆಳೆಗಾರರ ಪ್ರತಿಭಟನೆಗೆ ರಾಜ್ಯದ ರೈತ ಸಂಘಟನೆಗಳಿಂದ ಸಾಥ್ ನೀಡಿದ್ದು,ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದಾರೆ.
 
ಇನ್ನು ಇದೆ ವೇಳೆ ಮಾತನಾಡಿದ  ಕುರುಬೂರ್ ಶಾಂತಕುಮಾರ್ ಇಂದಿಗೆ ಅಹೋ ರಾತ್ರಿ ಧರಣಿಗೆ 24 ದಿನಗಳಾಗಿವೆ.ಎಲ್ಲಾ ರೈತರಿಗೂ ಉಪ ಉತ್ಪನ್ನಗಳ ಮೇಲೆ ಲಾಭ ಸಿಗಬೇಕು.ಡಿಸೆಂಬರ್ 23 ರ ಒಳಗೆ ಭರವಸೆ ಈಡೇರಿಸದಿದ್ದರೆ 26 ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು.ಕಬ್ಬು ಬೆಳೆಗಾರರ ಹೋರಾಟದ ಒತ್ತಡಕ್ಕೆ ಸಕ್ಕರೆ ಸಚಿವಾಲಯ ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆಗಳ ಮೇಲೆ ದಾಳಿ ನಡೆಸಿರುವುದು ಸ್ವಾಗತಾರ್ಹ.ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು.ಡಿಸೆಂಬರ್ 23 ರಂದು ವಿಶ್ವ ರೈತರ ದಿನಾಚರಣೆ ಜೊತೆಗೆ ರಾಜ್ಯ ಮಟ್ಟದ ರೈತ ಸಮಾವೇಶ ಧಾರವಾಡದಲ್ಲಿ ನಡೆಸುತ್ತೇವೆ.ಸಮಾವೇಶದಲ್ಲಿ ಕೃಷಿ ಕಾಯಕಯೋಗಿಗಳನ್ನ ಗುರುತಿಸಿ, ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಕೆ.ಕರಿಯಪ್ಪ