Select Your Language

Notifications

webdunia
webdunia
webdunia
webdunia

ಡಿಕೆಶಿ ಓಲೈಕೆ ರಾಜಕಾರಣ ಬಿಟ್ಟು, ದೇಶದ ಭದ್ರತೆ ಬಗ್ಗೆ ಆಲೋಚಿಸಲಿ- ಅರಗಜ್ಞಾನೇಂದ್ರ

Let DKshi leave politics and think about the country's security
bangalore , ಗುರುವಾರ, 15 ಡಿಸೆಂಬರ್ 2022 (18:48 IST)
ಡಿಕೆಶಿ ಹೇಳಿಕೆ ಮಾದ್ಯಮದಲ್ಲಿ ನೋಡಿ ತುಂಬಾ ನೋವಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದಾರೆ.ಜವಾಬ್ದಾರಿ ಸ್ಥಾನದಲ್ಲಿ ಇರುವವರು ಈ ರೀತಿ ಹೇಳಿಕೆ ನೀಡಬಾರದು‌.ಇದನ್ನ ಖಂಡಿಸ್ತೇನೆ.ಇದು ದೇಶದ ಆಂತರಿಕ ಭದ್ರತೆ ವಿಚಾರ.ಹಿಂದೆ ಇವರ ಕಾಲದಲ್ಲಿ ಪಟಾಕಿ ಹಬ್ಬದ ರೀತಿ ಬಾಂಬ್ ಹೊಡಿತಿದ್ರು.ಮೋದಿ ಬಂದ ಬಳಿಕ ಪೊಲೀಸ್ ಭದ್ರೆತೆ ಹೆಚ್ಚು ಮಾಡಿದ್ದಾರೆ.ಇದನ್ನ ನಿಯಂತ್ರಣ ಮಾಡಿ ಭಯೋತ್ಪಾದನೆ ನಿಗ್ರಹ ಮಾಡಲಾಗ್ತಿದೆ.ಮಂತ್ರಿಯಾಗಿ ಇದ್ದವರು, ಸರ್ಕಾರ ನಡೆಸಿದವರು.ನಮ್ಮ ಪೊಲೀಸರನ್ನ ಡಿ ಮಾರಲೈಸ್ ಮಾಡುವ ಕೆಲಸ ಮಾಡ್ತಿದ್ದಾರೆ.ಅಲ್ಪ ಸಂಖ್ಯಾತರ ಓಟಿಗಾಗಿ ಓಲೈಕೆ ರಾಜಕಾರಣ ಮಾಡ್ತಿದ್ದಾರೆ.
 
ಓಟರ್ ಐಡಿಗೂ, ಇದಕ್ಕೂ ಯಾವ ಸಂಬಂಧ.ಓಟರ್ ಐಡಿ ಮುಚ್ಚಿಡೋ ಕೆಲಸ ನಮ್ಮ ಸರ್ಕಾರ ಮಾಡಿಲ್ಲ.ಯಾರನ್ನ ಬಂಧಿಸಬೇಕೋ ಇದೆಲ್ಲವನ್ನೂ ಮಾಡಿದ್ದೇವೆ.ಇನ್ನು ಡಿಜಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಿಕ್ಕಿಹಾಕಿಕೊಂಡಿರೋ ಮನುಷ್ಯ ಹಿಂದೆ ಸಿಲುಕಿಕೊಂಡಿದ್ದ.ಕೋರ್ಟ್ ಜಾಮೀನಿನ ಮೇಲೆ ಹೊರಗೆ ಇದ್ದ.ಅವನನ್ನ ಹುಡುಕಲಾಗ್ತಿದ್ದು, ಅವನು ಸಿಕ್ಕಿದ್ದು ಹೆಚ್ಚಿನ ಜಾತಕ ಬೇಕಿಲ್ಲ.ಆದ್ರೆ ಡಿಕೆಶಿ ಇಂತ ವ್ಯಕ್ತಿ ಬಗ್ಗೆ ವಕಾಲತ್ತು ಮಾಡಿದ್ದು, ಏನು ಹೇಳಬೇಕು ಗೊತ್ತಿಲ್ಲ.ಆತ ಅಂದು, ಇಂದು ಟೆರರಿಸ್ಟೇ.ಡಿ.ಜಿ ಹೇಳಿದ್ದನ್ನ ಸಮರ್ಥನೆ ಮಾಡಿಕೊಳ್ತೇನೆ.ಪುಲ್ವಾಮ, ಬಾಂಬೆ ಎಲ್ಲಾ ಇವರ ಕೂಸೆ‌.ಅದನ್ನ ನಿರ್ನಾಮ ಮಾಡುವ ಕೆಲಸ ಕೇಂದ್ರ ಮಾಡುತ್ತಿದೆ.ಬಾಂಬನ್ನ ಇಟ್ಟು ಎಲ್ಲಾ ಮಾಡಿದ್ದಾನೆ.ಅವನ ಮನೆಯನ್ನೂ ರೇಡ್ ಮಾಡಲಾಗಿದೆ.ಎಲ್ಲಾ ಟ್ರಯಲ್ ಮಾಡಲಾಗಿದೆ.ಡಿಕೆಶಿ ಓಲೈಕೆ ರಾಜಕಾರಣ ಬಿಟ್ಟು, ದೇಶದ ಭದ್ರತೆ ಬಗ್ಗೆ ಆಲೋಚಿಸಲಿ ಎಂದು ಡಿಕೆಶಿ ವಿರುದ್ಧ ಆರಾಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಕಬ್ಬು ಬೆಳೆಗಾರರ ಪ್ರೊಟೆಸ್ಟ್