Select Your Language

Notifications

webdunia
webdunia
webdunia
webdunia

ಸುದೀಪ್ ಕಿಚ್ಚು ಕಾಂಗ್ರೆಸ್ ಕಚೇರಿಯನ್ನೇ ಸುಟ್ಟು ಹಾಕ್ತಿದೆ : ಪ್ರತಾಪ್ ಸಿಂಹ

ಸುದೀಪ್ ಕಿಚ್ಚು ಕಾಂಗ್ರೆಸ್ ಕಚೇರಿಯನ್ನೇ ಸುಟ್ಟು ಹಾಕ್ತಿದೆ : ಪ್ರತಾಪ್ ಸಿಂಹ
ಮೈಸೂರು , ಸೋಮವಾರ, 8 ಮೇ 2023 (11:30 IST)
ಮೈಸೂರು : ಕಿಚ್ಚ ಸುದೀಪ್ ಅವರ ಕಿಚ್ಚು ಕಾಂಗ್ರೆಸ್ ಕಚೇರಿಯನ್ನೇ ಸುಟ್ಟು ಹಾಕ್ತಿದೆ  ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
 
ಭಾನುವಾರ ನಂಜನಗೂಡಿನಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪರವಾಗಿ ಪ್ರಚಾರಕ್ಕೆ ಇಳಿಯುವ ಮೂಲಕ ಕನ್ನಡ ಚಿತ್ರರಂಗದ ಜನಪ್ರಿಯ ನಟ ಸುದೀಪ್ ಅವರು ಕಾಂಗ್ರೆಸ್ ಕಚೇರಿಗೆ ಕಿಚ್ಚು ಹಚ್ಚಿದ್ದಾರೆ.

ಕಿಚ್ಚ ಸುದೀಪ್ ಅವರ ಕಿಚ್ಚು ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಕಚೇರಿಯನ್ನು ಸುಟ್ಟು ಹಾಕುತ್ತಿದೆ. ಹೀಗಾಗಿ ನಾಯಕರ ರ್ಯಾಲಿಗೆ ಲಕ್ಷಾಂತರ ಜನ ರಾಜ್ಯದ ಉದ್ದಗಲಕ್ಕೂ ಬರುತ್ತಿದ್ದಾರೆ. ಈ ವಾತಾವರಣ ಗಮನಿಸಿದರೆ ಕರ್ನಾಟಕದಲ್ಲಿ ಈ ಬಾರಿ ನಿಶ್ಚಿತವಾಗಿ ಡಬಲ್ ಎಂಜಿನ್ ಸರ್ಕಾರ ಸ್ಥಾಪನೆಯಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

ಸಿದ್ದರಾಮಯ್ಯರಿಗೆ ಟಿಪ್ಪು ಸುಲ್ತಾನನ ಜನ್ಮದಿನ ಗೊತ್ತು, ಹನುಮನ ಜನ್ಮದಿನ ಗೊತ್ತಿಲ್ಲ. ರಾಮನಗರದ ಶಿವ ಬೆಟ್ಟವನ್ನು ಡಿ.ಕೆ ಶಿವಕುಮಾರ್ ಏಸು ಬೆಟ್ಟ ಮಾಡಿದ್ದಾರೆ. ಅವರ ಪಕ್ಷದ ಸಿದ್ದರಾಮಯ್ಯ ಹನುಮ ಜನ್ಮದಿನವನ್ನು ಪ್ರಶ್ನಿಸುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಉಮರ್ ನೇತೃತ್ವದ ತಾಲಿಬಾನ್ ಸರ್ಕಾರದಂತೆ ಇಲ್ಲೂ ತಾಲಿಬಾನ್ ಸರ್ಕಾರ ರಚನೆ ಆಗುತ್ತದೆ ಎಂದು ಕುಟುಕಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಎಸ್ಎಲ್ಸಿ ಫಲಿತಾಂಶ : ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ