Publish Date: Sat, 06 May 2023 (10:36 IST)
Updated Date: Sat, 06 May 2023 (10:31 IST)
ಮಂಡ್ಯ : ನಾಗಮಂಗಲದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಸಂಸದೆ ಸುಮಲತಾ ಕಾಂಗ್ರೆಸ್ ಕಾರ್ಯಕರ್ತರ ಬಳಿ ಕ್ಷಮೆಯಾಚಿಸಿದ್ದಾರೆ.
ಬಿಜೆಪಿಗೆ ಬೆಂಬಲ ನೀಡಿದ ವಿಚಾರವಾಗಿ ಮಾತನಾಡಿದ ಸುಮಲತಾ, ನನ್ನ ನಡೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರ ತರಿಸಿದ್ರೆ, ನೋವುಂಟು ಮಾಡಿದ್ರೆ ಕ್ಷಮೆಯಾಚಿಸುತ್ತೇನೆ. ಆದರೆ ನಿಮ್ಮ ನಾಯಕರ ನಡೆಗೆ ನಾನು ಹೊಣೆ ಅಲ್ಲ ಎಂದು ಭಾವುಕವಾಗಿ ಮಾತನಾಡಿದ್ದಾರೆ.
ನಿಮ್ಮ ರಾಜ್ಯಾಧ್ಯಕ್ಷರು ನನ್ನ ಬಗ್ಗೆ ಕೊಟ್ಟಿರುವ ಹೇಳಿಕೆಗಳನ್ನು ಗಮನಿಸಿ. ಆ ನಂತರ ನನ್ನ ನಿರ್ಧಾರ ಬಗ್ಗೆ ಪ್ರಶ್ನೆ ಮಾಡಿ ಎಂದ ಅವರು, ಬಿಜೆಪಿ ಪಕ್ಷದ ಅತ್ಯಂತ ಗೌರವದಿಂದ ಆಹ್ವಾನಿಸಿದರು ಎಂದು ತಿಳಿಸಿದ್ದಾರೆ.