Publish Date: Sat, 06 May 2023 (10:25 IST)
Updated Date: Sat, 06 May 2023 (10:27 IST)
ತುಮಕೂರು : ಕಾಂಗ್ರೆಸ್ ಕಾಲದಲ್ಲಿ ರಕ್ಷಣಾ ವ್ಯವಸ್ಥೆ ಹದಗೆಟ್ಟಿತ್ತು. ಅವರ ಕಾಲದಲ್ಲಿ ಎಲ್ಲವೂ ಲೂಟಿ ಆಗಿತ್ತು. ಅವರದ್ದು 85 ಪರ್ಸೆಂಟ್ ಕಮಿಷನ್ ಸರ್ಕಾರ ಆಗಿತ್ತು. ಎಚ್ಎಎಲ್ ನಿರ್ನಾಮ ಮಾಡಲಾಗಿತ್ತು. ಕಾಂಗ್ರೆಸ್ ನಾಯಕರ ಬಾಯಿಯಲ್ಲಿ ಎಚ್ಎಎಲ್ ಹೆಸರು ಬರುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಆಧುನಿಕ ರಕ್ಷಣಾ ವ್ಯವಸ್ಥೆ ಒದಗಿಸಿದೆ. ಕಾಂಗ್ರೆಸ್ – ಜೆಡಿಎಸ್ ಹಲವು ಕಾಮಗಾರಿ ನಿಲ್ಲಿಸಲು ಪ್ರಯತ್ನಿಸಿತ್ತು. ಕಾಂಗ್ರೆಸ್ 85 ಪರ್ಸೆಂಟ್ ಕಮಿಷನ್ ಕಾಮಗಾರಿ ಮಾಡಿದೆ.
ಕಾಂಗ್ರೆಸ್ ನ ಮಾಜಿ ಪ್ರಧಾನಿ 85 ಪರ್ಸೆಂಟ್ ಬಗ್ಗೆ ಒಪ್ಪಿಕೊಂಡಿದ್ದರು. ಜೆಡಿಎಸ್ ನ ಎಲ್ಲಾ ಅಭ್ಯರ್ಥಿ ಕಾಂಗ್ರೆಸ್ ನ ಅಭ್ಯರ್ಥಿ ಆಗಿರುತ್ತಾರೆ. ಕರ್ನಾಟಕವನ್ನು ನಂಬರ್ ಒನ್ ಮಾಡಲು ಈ ಬಾರಿಯ ನಿರ್ಧಾರ ಬಿಜೆಪಿ ಸರ್ಕಾರ ಮಾಡಲು ಸಂಕಲ್ಪ ಮಾಡಿ. ಬುಧವಾರ ಮತದಾನ ಇದೆ. ನಾವು ವಿಜಯ ಸಂಕಲ್ಪ ಮಾಡಬೇಕು. ಚುನಾವಣೆ ಗೆಲ್ಲುವುದು ನಿಶ್ಚಿತ. ಆದರೆ ಬೂತ್ ಬೂತ್ ನಲ್ಲಿ ಲೀಡ್ ಬರಬೇಕು. ಮನೆ ಮನೆಗೆ ಹೋಗಿ ಹೇಳಿ ಎಂದು ತಿಳಿಸಿದರು.