Publish Date: Fri, 05 May 2023 (20:25 IST)
Updated Date: Fri, 05 May 2023 (18:55 IST)
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಗೊಟ್ಟಿಗೆರೆ, ಸಿಕೆ ಪಾಳ್ಯ , ಹೊಮ್ಮದೇವನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮತಯಾಚನೆ ನಡೆಸಿದರು.ಇನ್ನೂ ಹೊಸೂರು ಕ್ಷೇತ್ರ ದ ಶಾಸಕ ವೈ ಪ್ರಕಾಶ್ ಕೂಡ ಸಾಥ್ ನೀಡಿದ್ರು. ಕೇಂದ್ರ ಸರ್ಕಾರ ದ ಜನವಿರೋದಿ ನೀತಿಯಿಂದ ಜನ ಕಂಗೆಟ್ಟು ಹೋಗಿದ್ದಾರೆ. ಪೆಟ್ರೋಲ್, ಗ್ಯಾಸ್, ದಿನ ಬಳಕೆಯ ವಸ್ತು ಗಳ ಬೆಲೆ ಏರಿಕೆಯಿಂದ ನೊಂದಿದ್ದಾರೆ ಹಾಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್ ಕೆ ರಮೇಶ್ ಅವರಿಗೆ ಮತ ನೀಡಿ ಸರಳ ಸಜ್ಜನಿಕೆಯ ವ್ಯಕ್ತಿ ನಿಮ್ಮ ಸೇವೆಗೆ ಇಂತಹ ವ್ಯಕ್ತಿಗಳು ಬೇಕೆ ಬೇಕು ಹಾಗಾಗಿ ಮತಹಾಕಿ ಗೆಲ್ಲಿಸಿ ಎಂದ್ರು. ಇನ್ನೂ ಆರ್ ಕೆ ರಮೇಶ್ ಮಾತನಾಡಿ ನಾನು ಕೂಡ ಕಳೆದ ಬಾರಿ ಸೋತ್ತಿದ್ದೇನೆ ಆದ್ರೂ ಕೂಡ ನಿಮ್ಮ ಜತೆ ಒಡನಾಟ ಒಟ್ಟುಕೊಂಡಿದ್ದೇನೆ ದಯವಿಟ್ಟು ನನಗ ಒಂದು ಅವಕಾಶ ಮಾಡಿಕೋಡಿ ಎಂದು.