Publish Date: Fri, 05 May 2023 (18:10 IST)
Updated Date: Fri, 05 May 2023 (17:59 IST)
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇದ ಮಾಡುವ ವಿಚಾರ ಅಪಾರ ಸಂಖ್ಯೆಯ ಹನುಮಭಕ್ತರಿಗೆ ನೋವುಂಟುಮಾಡಿದ್ದು ಬಿಜೆಪಿ ಸರಕಾರಗಂಗಾವತಿಯ ಜಿಲ್ಲೆಯ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಗೆ 100 ಕೋಟಿ ಬಿಡುಗಡೆ ಮಡಿದೆ. ಅದರೆ ಕಾಂಗ್ರೆಸ್ ಹನುಮ ಭಕ್ತರನ್ನು ಭಯೋತ್ಪಾದಕ ರಂತೆ ಕಾಣುತ್ತಿರುವುದು ವಿಪರ್ಯಾಸವೆಂದರು. ಭಜರಂಗದಳ ಕಾರ್ಯಕರ್ತರು ಪ್ರತಿವರ್ಷ ರಕ್ತದಾನ ಮಾಡುತ್ತಾರೆ ಅಲ್ಲದೆ ಕೊರೋನ ಸಂದರ್ಭದಲ್ಲಿ ಯಾವುದೇ ಜಾತಿ ಮತ ಬೇದ ಮಾಡದೇ ಹಗಲು ಇರುಳು ಶ್ರಮಿಸಿದ್ದಾರೆ. ಅಂತಹವರನ್ನು ಕಾಂಗ್ರೆಸ್ ಪಕ್ಷ ಭಯೋತ್ಪಾದಕರ ರೀತಿ ನೋಡುತ್ತಿದೆ ಎಂದರು.ಮಹದೇವಪುರ ಕ್ಷೇತ್ರದ ಗ್ರಾಮಾಂತರ ಭಾಗದ ಬಿದರಹಳ್ಳಿ, ಬಿಳಿಶಿವಾಳೆ, ಅದೂರು, ಬಂಡೆ ಹೊಸೂರು ಭಾಗಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಮಂಜುಳಾ ಲಿಂಬಾವಳಿ ಪರ ಭರ್ಜರಿ ರೋಡ್ ಶೋ ನಡೆಸಿ ಅಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು