Select Your Language

Notifications

webdunia
webdunia
webdunia
webdunia

ಬೈಕ್ ನಲ್ಲಿ ಬೀದಿ ನಾಯಿ ಗಣತಿ

Street dog census on bike
bangalore , ಬುಧವಾರ, 12 ಜುಲೈ 2023 (19:30 IST)
ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಯಿಂದ ಬೀದಿ ನಾಯಿಗಳ ಗಣತಿ ನಡೆಸಲಾಗುತ್ತಿದ್ದು, ಮೊದಲ ದಿನ 4 ಸಾವಿರ ಬೀದಿ ನಾಯಿಗಳ ಗಣತಿ ಮಾಡಲಾಗಿದೆ. ಬಿಬಿಎಂಪಿ ಸಿಬ್ಬಂದಿ ಬೈಕ್ ನಲ್ಲಿ ಬೀದಿ ನಾಯಿ ಗಣತಿ ನಡೆಸುತ್ತಿದೆ. ಪಶುಪಾಲನಾ ವಿಭಾಗದ ಸಿಬ್ಬಂದಿ ನಿನ್ನೆ ನಡೆದ ಬೀದಿ ನಾಯಿಗಳ ಸರ್ವೆ ಬಗ್ಗೆ ಮಾಹಿತಿ ನೀಡಿದ್ದಾರೆ. ಒಂದೇ ದಿನದಲ್ಲಿ ಬಿಬಿಎಂಪಿ ನಾಲ್ಕು ಸಾವಿರ ಬೀದಿ ನಾಯಿಗಳನ್ನು ಗಣತಿ ಮಾಡಿದೆ. 
ಸಂತಾನ‌ ಚಿಕಿತ್ಸೆ ಹಾಗೂ ರೇಬಿಸ್‌ ಲಸಿಕೆ ಕಾರ್ಯಕ್ರಮಗಳ ಯಶಸ್ವಿಗೊಳಿಸುವ ಉದ್ದೇಶದಿಂದ ನಡೆಯುತ್ತಿರುವ ಬೀದಿ ನಾಯಿಗಳ ಗಣತಿ ನಡೆಸಲಾಗುತ್ತಿದ್ದು, ಪಶುಪಾಲನೆ ವಿಭಾಗದಿಂದ 11 ಸಿಬ್ಬಂದಿ ಹಾಗೂ  ಬಿಬಿಎಂ ಪಿಯ 30 ಸಿಬ್ಬಂದಿ ಸೇರಿದಂತೆ ಒಟ್ಟು 100 ಮಂದಿ ನಿಯೋಜಿನೆ ಮಾಡಲಾಗಿದೆ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗ  ನಿರ್ದೇಶಕ ಡಾ. ರವಿಕುಮಾರ್ ಮಾಹಿತಿ ನೀಡಿದ್ದಾರೆ. 
 
ತಲಾ ಇಬ್ಬರಂತೆ ತಂಡಗಳು ನಗರದ ಪ್ರಮುಖ ಸ್ಥಳದಲ್ಲಿ ಬೈಕ್‌ ಮೂಲಕ ಗಣತಿಯ ಮಾಹಿತಿಯನ್ನು ಆ್ಯಪ್‌ನಲ್ಲಿ ದಾಕಲಿಸಲು ಸೂಚನೆ ನೀಡಲಾಗಿದೆ. ಮುಂದಿನ 13 ದಿನ ಬೀದಿ ನಾಯಿಗಳ ಗಣತಿ ಸಂಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಿ ಪುರದ ಫುಡ್‌ ಸ್ಟ್ರಿಟ್‌ಗೆ ನ್ಯೂ ಲುಕ್