Select Your Language

Notifications

webdunia
webdunia
webdunia
webdunia

ಟೆಕ್ಕಿಗೆ ಇರಿದು ಹಣ ದೋಚಿದ; ಸಿನಿಮಾ ಸ್ಟೈಲ್ ನಲ್ಲಿ ಪೊಲೀಸರ ಗುಂಡೇಟು ತಿಂದ

ಟೆಕ್ಕಿಗೆ ಇರಿದು ಹಣ ದೋಚಿದ; ಸಿನಿಮಾ ಸ್ಟೈಲ್ ನಲ್ಲಿ ಪೊಲೀಸರ ಗುಂಡೇಟು ತಿಂದ
ಆನೇಕಲ್ , ಮಂಗಳವಾರ, 4 ಜೂನ್ 2019 (16:32 IST)
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಟೆಕ್ಕಿಗೆ ಚಾಕು ತೋರಿಸಿ ಅಡ್ಡಗಟ್ಟಿ ಎಟಿಂಎಂಗೆ ಕರೆದು ಕೊಂಡು ಹೋಗಿ ಹಣ ಡ್ರಾ ಮಾಡಿ ಕೊಡುವಂತೆ ಹೇಳಿದ್ದ ಭೂಪನೊಬ್ಬನನ್ನು ಸಿನಿಮೀಯ ರೀತಿಯಲ್ಲಿ ಬಂಧನ ಮಾಡಲಾಗಿದೆ.

ಟೆಕ್ಕಿಗೆ ಚಾಕುವಿನಿಂದ ಸುಮಾರು 10 ಕಡೆ ಇರಿದು ಹಲ್ಲೆ ನಡೆಸಿದ್ದ ಆರೋಪಿಯ ಮೇಲೆ ಅತ್ತಿಬೆಲೆ ಠಾಣೆಯ ಸಿಪಿಐ ಗಿರೀಶ್ ಶೂಟ್ ಔಟ್ ನಡೆಸಿರುವ ಘಟನೆ ನಡೆದಿದೆ.  ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸರಿಗೆ ರಾತ್ರಿ ಹಲ್ಲೆಯ ಖಚಿತ ಮಾಹಿತಿ ಮೇರೆಗೆ ರೌಡಿಶೀಟರ್ ಶಶಾಂಕ್(23) ನನ್ನು ಬಂಧಿಸಲು ತೆರಳಿದ್ದು ಈ ವೇಳೆ ಶಶಾಂಕ್ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆ ಪೊಲೀಸರು ಆರೋಪಿಯನ್ನು ಶರಣಾಗುವಂತೆ ತಿಳಿಸಿದ್ರೂ ಪುಂಡಾಟ ಮೆರೆದ ಆರೋಪಿಗೆ 2 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕೊನೆಗೆ ಶಶಾಂಕ್ ಬಾಲಗಾಲಿಗೆ ಮತ್ತೊಂದು ಗುಂಡು ಹಾರಿಸಿ ಬಂಧಿಸಿದ್ದಾರೆ. ಇನ್ನು ಆರೋಪಿ ಶಾಶಂಕ್ ಬನ್ನೇರುಘಟ್ಟ, ಹುಳಿಮಾವು, ಕೋಣನಕುಂಟೆ ಸೇರಿದಂತೆ ಬೇರೆ ಬೇರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ,  ರಾಬರಿ ಸೇರಿದಂತೆ ಹಲವು ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದ.

ಕಾರ್ಯಾಚರಣೆಯಲ್ಲಿ ಅತ್ತಿಬೆಲೆ ಸಿಪಿಐ ಬಾಲಾಜಿ, ಎಸ್.ಐ. ಮುರಳೀಧರ ಹಾಗೂ ತಂಡ ಭಾಗವಹಿಸಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅಡಿಷನಲ್ ಎಸ್ಪಿ ಸುಜಿತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸೇಂದಿ ಸೇವಿಸಿದವರ ಕಥೆ ಏನಾಯ್ತು?