Select Your Language

Notifications

webdunia
webdunia
webdunia
webdunia

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯ ಮತ ಎಣಿಕೆ ಆರಂಭ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯ ಮತ ಎಣಿಕೆ ಆರಂಭ
bangalore , ಬುಧವಾರ, 15 ಡಿಸೆಂಬರ್ 2021 (14:10 IST)
ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘಕ್ಕೆ ಡಿ.12 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಡಿ.15ರಂದು ಮಂಗಳೂರಿನ ಹಂಪನಕಟ್ಟೆಯ ಎಂಸಿಸಿ ಬ್ಯಾಂಕ್ ನಲ್ಲಿ ಆರಂಭಗೊಂಡಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ದ.ಕ.ಮತ ಕ್ಷೇತ್ರದಲ್ಲಿ ಒಟ್ಟು 6,529 ಮತದಾರರ ಪೈಕಿ 5,427 ಮಂದಿ ಮತ ಚಲಾಯಿಸಿ ಶೇ‌ 83.12 ಮತದಾನವಾಗಿತ್ತು. ಸುಳ್ಯ ಹಾಗು ಕಾಸರಗೋಡು ಜಿಲ್ಲೆ ಸೇರಿದ ಸುಳ್ಯ ಮತಗಟ್ಟೆಯಲ್ಲಿ ಒಟ್ಟು 5125
ಮತದಾರರಲ್ಲಿ ಒಟ್ಟು 4359 ಮಂದಿ ಮತ ಚಲಾಯಿಸಿ ಶೇ.85.05 ಮತದಾನ ದಾಖಲಾಗಿತ್ತು. ದ.ಕ ಮತ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹಾಗೂ ಸಹೋದರ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾಪ್ರಸಾದ್ ಮತ್ತು ಉಡುಪಿಯಲ್ಲಿ ಉದ್ಯಮಿಯಾಗಿರುವ ಸುಳ್ಯ ಮರ್ಕಂಜದವರಾದ ಹೇಮಾನಂದ ಹಲ್ದಡ್ಕ ಅವರು ಅಭ್ಯರ್ಥಿಗಳಾಗಿ ಸ್ಪರ್ಧಾ ಕಣದಲ್ಲಿದ್ದು ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಬಿರುಸಿನ ಮತದಾನದ ಬಳಿಕ ಇಂದು ಹೊರ ಬರಲಿರುವ ಫಲಿತಾಂಶದ ಬಗ್ಗೆ ಕುತೂಹಲ ತಾರಕಕ್ಕೇರಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ. ಅಭ್ಯರ್ಥಿಗಳು, ಬೂತ್ ಪ್ರತಿನಿಧಿಗಳು ಮತ್ತು ಬೆಂಬಲಿಗರು ಮುಂಜಾನೆಯೇ ಮತ ಎಣಿಕೆ ಕೇಂದ್ರಕ್ಕೆ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ತೋರಿಸುತ್ತೇವೆ- ಮಾಜಿ ಸಿಎಂ ಹೆಚ್.ಡಿ