Select Your Language

Notifications

webdunia
webdunia
webdunia
webdunia

ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಚುನಾವಣೆ ಫಲಿತಾಂಶ : ಮತ ಎಣಿಕೆ ಆರಂಭ

ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಚುನಾವಣೆ ಫಲಿತಾಂಶ : ಮತ ಎಣಿಕೆ ಆರಂಭ
ಬೆಂಗಳೂರು , ಸೋಮವಾರ, 6 ಸೆಪ್ಟಂಬರ್ 2021 (09:25 IST)
ಬೆಂಗಳೂರು : ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಈಗಾಗಲೇ ಮತ ಎಣಿಕೆ ಕಾರ್ಯ ಶುರುವಾಗಿದೆ. ಯಾರಿಗೆ ಗೆಲುವು ಸಿಗಲಿದೆ ಎಂಬುದು ಕಾದು ನೋಡಬೇಕು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 58 ವಾರ್ಡ್ ಗಳಲ್ಲಿ 585 ಅಭ್ಯರ್ಥಿಗಳು ಚುನಾವಣೆ ಎದುರಿಸಿದ್ದು, ಬಿಜೆಪಿ 55, ಕಾಂಗ್ರೆಸ್ 45, ಜೆಡಿಎಸ್ 11, ಎಂಇಎಸ್ 21, ಎಎಪಿ 27, ಪ್ರಜಾಕೀಯ 1, ಎಐಎಂಐ 7, ಎಸ್ ಡಿಪಿಐ 1, ಪಕ್ಷೇತರವಾಗಿ 217 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 55 ವಾರ್ಡ್ ಗಳ ಪೈಕಿ 300 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಇದರಲ್ಲಿ ಕಾಂಗ್ರೆಸ್ 55, ಬಿಜೆಪಿ 47, ಜೆಡಿಎಸ್ 46, ಆಮ್ ಆದ್ಮಿ 26, ಬಿಎಸ್ ಪಿ 6 ಹಾಗೂ 120 ಮಂದಿ ಪಕ್ಷೇತರರು ಸ್ಪರ್ಧಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್ ಗಳಲ್ಲಿ 420 ಅಭ್ಯರ್ಥಿಗಳು ಚುನಾವಣೆಗೆ ನಿಂತಿದ್ದು,ಬಿಜೆಪಿ 82, ಕಾಂಗ್ರೆಸ್ 82, ಎಎಪಿ 41, ಜೆಡಿಎಸ್-49, ಪ್ರಜಾಕೀಯ 11, ಸಿಪಿಐ (ಎಂ) 1, ಬಿಎಸ್ ಪಿ 7, ಕರ್ನಾಟಕ ರಾಷ್ಟ್ರ ಸಮಿತಿ 4, ಎಐಎಂಐಎಂ 12, ಎಸ್ ಡಿಪಿಐ 4, ಕರ್ನಾಟಕಶಿವಸೇನೆ 4, ಪ್ರಜಾಕೀಯ11, ಕರ್ನಾಟಕ ಸೇವಾ ಪಾರ್ಟಿ 1,ಹಾಗೂ 122 ಮಂದಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ರಾಹುಲ್ ಗಾಂಧಿ ಜಮ್ಮು ಪ್ರವಾಸ