Select Your Language

Notifications

webdunia
webdunia
webdunia
webdunia

ಕನ್ನಡದ ಪೂಜಾರಿ ಹೀರೇಮಗಳೂರು ಕಣ್ಣನ್ ಗೆ ವೇತನ ವಾಪಸ್ ಮಾಡುವಂತೆ ಕೇಳಿದ ರಾಜ್ಯ ಸರ್ಕಾರ

Hiremagaluru Kannan

Krishnaveni K

ಬೆಂಗಳೂರು , ಮಂಗಳವಾರ, 23 ಜನವರಿ 2024 (11:11 IST)
Photo Courtesy: facebook
ಬೆಂಗಳೂರು: ಕನ್ನಡದಲ್ಲೇ ಮಂತ್ರ ಹೇಳುವ ಖ್ಯಾತಿಯ ಹೀರೇಮಗಳೂರು ಕಣ್ಣನ್ ಗೆ 10 ವರ್ಷಗಳಿಂದ ನೀಡುತ್ತಿದ್ದ ವೇತನ ವಾಪಸ್ ಮಾಡುವಂತೆ ಸರ್ಕಾರ ನೋಟಿಸ್ ನೀಡಿದೆ.

ಹೀರೇಮಗಳೂರು ಕಣ್ಣನ್ ಚಿಕ್ಕಮಗಳೂರು ಹೊರವಲಯದಲ್ಲಿರುವ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರು. ಕನ್ನಡದಲ್ಲಿಯೇ ಮಂತ್ರ ಹೇಳಿ ಪೂಜೆ ಮಾಡುವುದು ಅವರ ವಿಶೇಷತೆ.

ಇವರಿಗೆ ರಾಜ್ಯ ಸರ್ಕಾರ 7,500 ರೂ. ವೇತನ ನೀಡುತ್ತಿತ್ತು. ಆದರೆ ದೇವಾಲಯದ ಆದಾಯ ಕಡಿಮೆಯಿದೆ ಎಂಬ ಕಾರಣಕ್ಕೆ ಅವರಿಗೆ ನೀಡಲಾಗುತ್ತಿದ್ದ ವೇತನದಲ್ಲಿ ತಿಂಗಳಿಗೆ 4,500 ರೂ.ಗಳಂತೆ 10 ವರ್ಷಕ್ಕೆ 4,74,000 ರೂ.ಗಳನ್ನು ಹಿಂದಿರುಗಿಸುವಂತೆ ಜಿಲ್ಲಾಡಳಿತ ನೋಟಿಸ್ ನೀಡಿದೆ.

ಚಿಕ್ಕಮಗಳೂರಿನ ಕೋದಂಡ ರಾಮ ದೇವಾಲಯದಲ್ಲಿ ಕನ್ನಡದಲ್ಲಿ ಮಂತ್ರ ಹೇಳುವುದು ವಿಶೇಷವಾಗಿದೆ. ಇದೇ ಕಾರಣಕ್ಕೆ ಭಕ್ತರು ಇಲ್ಲಿಗೆ ವಿಶೇಷವಾಗಿ ಭೇಟಿ ಕೊಡುತ್ತಾರೆ. ಆದರೆ ಈಗ ಅರ್ಚಕರ ವೇತನ ವಾಪಸ್ ಕೇಳಿರುವುದು ವಿವಾದಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರಿಗಾಲಲ್ಲೇ ಅಯೋಧ್ಯೆಗೆ ಬಂದಿದ್ದ ನಟ ಜಾಕಿಶ್ರಾಫ್!