Select Your Language

Notifications

webdunia
webdunia
webdunia
webdunia

ಪ್ರೇಮಿಯೊಂದಿಗೆ ಸರಸವಾಡಲು ಸ್ಕೆಚ್ ಹಾಕಿ ಪತಿಯನ್ನೇ ಮುಗಿಸಿದ ಪತ್ನಿ!

ಚಿಕ್ಕಮಗಳೂರು
ಚಿಕ್ಕಮಗಳೂರು , ಸೋಮವಾರ, 14 ಆಗಸ್ಟ್ 2023 (12:03 IST)
ಚಿಕ್ಕಮಗಳೂರು : ತನ್ನ ಪ್ರೇಮಿಯೊಂದಿಗೆ ಸರಸವಾಡಲು ಪತ್ನಿಯೇ ಪತಿಯನ್ನ ಮುಗಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.

ಪತಿ ನವೀನ್ (28) ಮೃತ ದುರ್ದೈವಿ, ಪತ್ನಿ ಪಾವನಾ ಬಂಧಿತ ಆರೋಪಿ. ಗಂಡನಿಗೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಜ್ಞಾನ ತಪ್ಪಿಸಿದ ಪಾವನಾ ಬಳಿಕ ಪ್ರೇಮಿಯ ಜೊತೆ ಬೈಕ್ನಲ್ಲಿ ಮೃತದೇಹವನ್ನ ತೆಗೆದುಕೊಂಡು ಹೋಗಿ ಕೆರೆಗೆ ಎಸೆದು ಬಂದಿದ್ದಾಳೆ.

ಬಳಿಕ ಇದೊಂದು ಸಹಜ ಸಾವು ಅಂತಾ ಬಿಂಬಿಸಿ ನಾಟಕವಾಡಿದ್ದಾಳೆ. ಆಗಸ್ಟ್ 6ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿದೆ. ನಂತರ ಇದು ಸಹಜ ಸಾವಲ್ಲ ಎಂದು ಪೋಷಕರು ದೂರು ನೀಡಿದ್ದಾರೆ. 

ಪೋಷಕರ ದೂರಿನ ಆಧಾರದ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ ಇದು ಸಹಜ ಸಾವಲ್ಲ ಅನ್ನೋದು ಖಾತ್ರಿಯಾಗಿದೆ. ಪತ್ನಿ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗ್ಳೂರಲ್ಲೊಂದು ಅಮಾನವೀಯ ಘಟನೆ : ವಿಷವುಣಿಸಿ 18 ಶ್ವಾನಗಳ ಹತ್ಯೆ!